Job Description: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಿತ 'ಜಿಸ್ಯಾಟ್-30' ಉಪಗ್ರಹವನ್ನು ಜನವರಿ 17ರಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಉಡ್ಡಯನ ಕೇಂದ್ರದಿಂದ ಉಡಾವಣೆ ಮಾಡಲಾಗುವುದು. ಭಾರತೀಯ ಕಾಲಮಾನ ಅಪರಾಹ್ನ 2.35ರ ಹೊತ್ತಿಗೆ ಎರೇನ್ ಲಾಂಚ್ ಕಾಂಪ್ಲೆಕ್ಸ್ ಉಡ್ಡಯನ ಕೇಂದ್ರದಿಂದ 'ಎರೇನ್ 5' ಎಂಬ ರಾಕೆಟ್ ಮೂಲಕ ಈ ಉಪಗ್ರಹ ಉಡಾವಣೆಗೊಳ್ಳಲಿದೆ ಎಂದು ಇಸ್ರೋ ಹೇಳಿದೆ. ಈ ಉಪಗ್ರಹ ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್‌ಲಿಂಕಿಂಗ್, ಡಿಟಿಎಚ್, ಟೆಲಿಪೋರ್ಟ್ ಸೇವೆಗಳು, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಎಸ್‌ಎನ್‌ಜಿ), ಸೆಲ್ಯೂರಲ್ ಬ್ಯಾಕ್‌ಹೌಲ್ ಕನೆಕ್ಟಿವಿಟಿ ಸೇರಿದಂತೆ ಇನ್ನೂ ಅನೇಕ ಸೇವೆಗಳನ್ನು ಮುಂದಿನ 15 ವರ್ಷಗಳವರೆಗೆ ನೀಡಲಿದೆ.