Job Description: ಕಾಡ್ಗಿಚ್ಚಿನಿಂದಾಗಿ ಆಸ್ಟ್ರೇಲಿಯಾದಲ್ಲಿ ನಾಲ್ಕೇ ತಿಂಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ 400 ಮಿಲಿಯನ್ ಮೆಟ್ರಿಕ್ ಟನ್‌ನಷ್ಟಾಗಿದೆ. ಕಳೆದ ವರ್ಷ ಅಮೆಜಾನ್ ಕಾಡ್ಗಿಚ್ಚಿನಲ್ಲಿ ಉಂಟಾದ್ದಕ್ಕಿಂತ ದುಪ್ಪಟ್ಟು ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಇದಾಗಿದೆ. ಈಗಿನ ಆಸ್ಟ್ರೇಲಿಯಾದ ಕಾಡ್ಗಿಚ್ಚಿನಿಂದ ಉಂಟಾದ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆ ಇಂಗಾಲ ಹೊರಹಾಕುವ 116 ಸಣ್ಣ ದೇಶಗಳ ಕಾರ್ಬನ್ ಡೈಆಕ್ಸೈಡ್‌ಗೆ ಸಮನಾಗಿದೆ. ಅದರಲ್ಲೂ ಇದು 2018ರಲ್ಲಿ ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನಿಂದ ಉಂಟಾದ ಕಾರ್ಬನ್ ಡೈಆಕ್ಸೈಡ್ ಪ್ರಮಾಣಕ್ಕಿಂತ ಒಂಬತ್ತು ಪಟ್ಟು ಹೆಚ್ಚಿನದ್ದಾಗಿದೆ.