Job Description: ನವದೆಹಲಿ: ದೇಶೀಯ ನಿರ್ಮಿತ ನೌಕಾಪಡೆ ಆವೃತ್ತಿಯ ಲಘು ಯುದ್ಧ ವಿಮಾನ 'ತೇಜಸ್' ದೇಶದ ಏಕೈಕ ಯುದ್ಧವಿಮಾನ ವಾಹಕ ಹಡಗು 'ಐಎನ್‌ಎಸ್ ವಿಕ್ರಮಾದಿತ್ಯ'ದಲ್ಲಿ ಇಳಿದು, ಮತ್ತೆ ಹಾರಾಟ ನಡೆಸಿದೆ. ಹಡಗು ತಟ್ಟೆಯಿಂದ ಹಾರುವ ಯುದ್ಧ ವಿಮಾನದ ಸ್ವದೇಶಿ ನಿರ್ಮಾಣ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಅರಬಿ ಸಮುದ್ರ ಭಾಗದಲ್ಲಿ ನಿಯೋಜನೆಗೊಂಡಿರುವ ಐಎನ್‌ಎಸ್ ವಿಕ್ರಮಾದಿತ್ಯ ಪ್ರಸ್ತುತ ನೌಕಾಪಡೆ ಆವೃತ್ತಿಯ 'ಮಿಗ್-29' ಯುದ್ಧ ವಿಮಾನ ಹೊಂದಿದೆ. ವಿಕ್ರಮಾದಿತ್ಯ 30 ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ವಿಸ್ತಾರ ಮತ್ತು ಸಾಮರ್ಥ್ಯ ಹೊಂದಿದೆ.