Job Description: ಬೆಂಗಳೂರು, ಜನವರಿ 11: ವಿದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಫೇಸ್ ರೆಕಗ್ನಿಶನ್ (ಮುಖ ಗುರುತಿಸುವ) ತಂತ್ರಜ್ಞಾನ ಐಟಿ ನಗರ ಬೆಂಗಳೂರಿಗೆ ಕಾಲಿಟ್ಟಿದೆ. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಈ ಫೇಶಿಯಲ್ ರೆಕಗ್ನಿಶನ್ ತಂತ್ರಜ್ಞಾನವುಳ್ಳ ಯಂತ್ರ ಸ್ಥಾಪನೆ ಮಾಡಲಾಗುತ್ತಿದ್ದು, ಅಪರಾಧ ನಿಯಂತ್ರಣದ ಉದ್ದೇಶದಿಂದ ಈ ಯಂತ್ರ ಅಳವಡಿಸಲಾಗುತ್ತಿದೆ. ನಿರ್ಭಯಾ ನಿಧಿ ಅಡಿಯಲ್ಲಿ ರೈಲ್ವೆ ಇಲಾಖೆಗೆ 250 ಕೋಟಿ ದೊರೆತಿದ್ದು, ಅದನ್ನು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅಪರಾಧಗಳ್ನು ತಡೆಗಟ್ಟಲು ಬಳಸಲಾಗುತ್ತಿದೆ. ಅದರ ಅಂಗವಾಗಿಯೇ ರೈಲ್ವೆ ನಿಲ್ದಾಣಕ್ಕೆ ಬರುವ ಅಪರಾಧಿಗಳನ್ನು, ಪುಂಡರನ್ನು, ಆರೋಪಿಗಳನ್ನು ಗುರುತಿಸಲೆಂದು ಫೇಸ್ ರೆಕಗ್ನಿಶನ್ ತಂತ್ರಜ್ಞಾನಯುಕ್ತ ಯಂತ್ರವನ್ನು ಅಳವಡಿಸಲಾಗುತ್ತಿದೆ.