Job Description: ಮೈಅಪ್ ಅಪ್ಲಿಕೇಶನ್ ಮೂಲಕ ಹೆಚ್ ಡಿಎಫ್ ಸಿ ಬ್ಯಾಂಕ್ ಗ್ರಾಹಕರಿಗೆ ನಾಲ್ಕು ರೀತಿಯ ಆಯ್ಕೆಗಳನ್ನು ನೀಡಿದ್ದು, ಮೈ ಸೊಸೈಟಿ, ಮೇಪೇರ್, ಮೈಕ್ಲಬ್ ಮತ್ತು ಮೈಸಿಟಿ. ಈ ಆಯ್ಕೆಗಳ ಮೂಲಕ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಈ ಆಯಪ್ ಸಹಾಯದಿಂದ ನಗರ ಸ್ಥಳೀಯ ಸಂಸ್ಥೆಗಳು, ವಸತಿ ಸಂಘಗಳು, ಸ್ಥಳೀಯ ಕ್ಲಬ್ ಗಳು ಮತ್ತು ಧಾರ್ಮಿಕ ಸಂಸ್ಥೆಗಳು ಇದರ ಲಾಭ ಪಡೆಯಬಹುದು ಎಂದು ಬ್ಯಾಂಕ್ ತಿಳಿಸಿದೆ. ಭಾರತದಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಬ್ಯಾಂಕ್ ಈ ಆಯಪ್ ಅಭಿವೃದ್ಧಿ ಪಡಿಸಿದೆ. ಬ್ಯಾಂಕ್ ಗ್ರಾಹಕರು ಈ ಆಯಪ್ ಮೂಲಕ ಬಿಲ್ ಪಾವತಿ ವರದಿ ಸೇರಿದಂತೆ ಎಲ್ಲ ಮಾಹಿತಿ ಸಿಗಲಿವೆ.