Job Description: ಇತ್ತೀಚೆಗೆ ನೆರೆ ರಾಷ್ಟ್ರ ಪಾಕಿಸ್ತಾನದ ಜೊತೆ ಸಂಪರ್ಕ ಹೊಂದಿ ರಾಷ್ಟ್ರದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ನೌಕಾಪಡೆಯ ಏಳು ಸಿಬ್ಬಂದಿಯನ್ನು ಬಂಧಿಸಿದ ನಂತರ, ಭಾರತೀಯ ನೌಕಾಪಡೆ ತನ್ನ ಎಲ್ಲಾ ಆನ್‌ಬೋರ್ಡ್ ಹಡಗುಗಳು ಮತ್ತು ನೌಕಾ ನೆಲೆಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸಿ ನಿರ್ದೇಶನ ನೀಡಿದೆ. ಈಗಿನಿಂದಲೇ ನಿಷೇಧ "ಈಗಿನಿಂದ ನೌಕಾ ನೆಲೆಗಳು ಮತ್ತು ಹಡಗುಗಳಲ್ಲಿ ಇಲ್ಲಿಂದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆಪ್ ಮತ್ತು ಇತರ ಮೆಸೆಂಜರ್‌ಗಳನ್ನು ಒಳಗೊಂಡಂತೆ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲಾಗುತ್ತದೆ" ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.