Job Description: ಬೆಂಗಳೂರು : ಇದುವರೆಗೆ ಆನೆ ಮತ್ತಿತರ ವನ್ಯ ಜೀವಿಗಳ ದಾಳಿಯಿಂದಾಗಿ ಬೆಳೆ ನಾಶ ಹೊಂದಿದಂತ ಸಂದರ್ಭದಲ್ಲಿ, ಬೆಳೆ ಪರಿಹಾರವಾಗಿ ಅರ್ಜಿ ಸಲ್ಲಿಸಿ, ಆನಂತ್ರ ಪರಿಹಾರವನ್ನು ಪಡೆಯಬೇಕಿತ್ತು. ಆದ್ರೇ ಇಂತಹ ಪದ್ದತಿಗೆ ಇಲಾಖೆ ಇತಿಶ್ರೀ ಹಾಡಿದ್ದು, ಇದೀಗ ರಾಜ್ಯದ ರೈತರು ಅರಣ್ಯ ಬೆಳೆಹಾನಿ ವಿತರಣೆಗೆ ಇ-ಪರಿಹಾರ್ ಆಪ್ ಜಾರಿಗೆ ತಂದಿದ್ದು, ಈ ಮೂಲಕ ಅರ್ಜಿ ಸಲ್ಲಿಸಿ, ಪರಿಹಾರವನ್ನು ಪಡೆಯಬಹುದಾಗಿದೆ. ಇದರಿಂದಾಗಿ ಪರಿಹಾರದ ಹಣ ಸೋರಿಕೆ, ಮಧ್ಯವರ್ತಿಗಳ ಕಾಟವೂ ತಪ್ಪಿ, ರೈತರಿಗೆ ಸಿಹಿ ಸುದ್ದಿ ದೊರೆತಿದೆ.