Job Description: ವಾಶಿಂಗ್ಟನ್, ಜ. 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಜಾಗತಿಕ ವ್ಯವಹಾರಗಳನ್ನು ನಿಭಾಯಿಸುವ ಸಾಮರ್ಥ್ಯದ ಬಗ್ಗೆ ಬೇರೆ ದೇಶಗಳ ಜನರಿಗಿಂತಲೂ ಭಾರತೀಯರಿಗೆ ಹೆಚ್ಚು ವಿಶ್ವಾಸವಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.ಅಮೆರಿಕ ಮತ್ತು ಅದರ ಅಧ್ಯಕ್ಷರ ಬಗ್ಗೆ 32 ದೇಶಗಳ ನಾಗರಿಕರಿಂದ ಪ್ಯೂ ರಿಸರ್ಚ್ ಸೆಂಟರ್ ಅಭಿಪ್ರಾಯ ಸಂಗ್ರಹಿಸಿದೆ.ಟ್ರಂಪ್‌ರ ವಿದೇಶ ನೀತಿಯ ಬಗ್ಗೆ ತಮಗೆ ಸಂಪೂರ್ಣ ಭರವಸೆಯಿದೆ ಎಂದು 10ರಲ್ಲಿ 6 ಭಾರತೀಯರು (56 ಶೇಕಡ) ಹೇಳಿದ್ದಾರೆ.