Job Description: ನವದೆಹಲಿ (ಪಿಟಿಐ): ಸಂಚಾರ ನಿಯಮ ಉಲ್ಲಂಘನೆಗಾಗಿ ನೂತನ ಮೋಟಾರು ವಾಹನ ಕಾಯ್ದೆಯಡಿ ನಿಗದಿ ಪಡಿಸುವ ದಂಡದ ಮೊತ್ತವನ್ನು ಯಾವುದೇ ರಾಜ್ಯ ಸರ್ಕಾರ ಕಡಿತಗೊಳಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ರಾಜ್ಯಗಳಿಗೆ ಈ ಸಂಬಂಧ ಸೂಚನೆ ಕಳುಹಿಸಿರುವ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ‘ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ಸಂಸತ್ತು ಅಂಗೀಕರಿಸಿದೆ. ರಾಜ್ಯಗಳು ರೂಪಿಸಿದ ಕಾಯ್ದೆಗೆ ರಾಷ್ಟ್ರಪತಿ ಅನುಮೋದನೆ ಇಲ್ಲದ ಹೊರತು ರಾಜ್ಯಗಳು ದಂಡಶುಲ್ಕ ಕಡಿತಗೊಳಿಸಬಾರದು’ ಎಂದು ತಿಳಿಸಿದೆ.