Job Description: ಮಾಜಿ ಏರ್ ಚೀಫ್ ಮಾರ್ಷಲ್ ಬಿ. ಎಸ್. ಧನೋವಾ ಅವರು ನೋಟು ನಿಷೇಧ ಘೋಷಣೆ ನಂತರದ ಆಸಕ್ತಿಕರ ಸಂಗತಿಯನ್ನು ತೆರೆದಿಟ್ಟಿದ್ದಾರೆ. ನಾಲ್ಕು ವರ್ಷದ ಹಿಂದೆ ನೋಟು ನಿಷೇಧ ಮಾಡಿದ ನಂತರ ಭಾರತೀಯ ವಾಯುಸೇನೆಯು 625 ಟನ್ ನಷ್ಟು ಹೊಸ ನೋಟುಗಳನ್ನು ದೇಶದ ನಾನಾ ಭಾಗಗಳಿಗೆ ಸಾಗಣೆ ಮಾಡಿದೆ ಎಂದು ಹೇಳಿದ್ದಾರೆ. ಅಂದ ಹಾಗೆ, 1 ಟನ್ ಅಂದರೆ 1000 ಕೇಜಿ. ವಾಯುಸೇನೆಯು 6,25,000 ಕೇಜಿ ತೂಕದ ನೋಟುಗಳನ್ನು ಸಾಗಾಟ ಮಾಡಿದೆ ಅಂತಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರುಪಾಯಿ ನೋಟುಗಳನ್ನು ನವೆಂಬರ್ 8, 2016ರಂದು ನಿಷೇಧ ಮಾಡಿದ್ದರು.