Job Description: ಹೊನ್ನಾವರ (ಉತ್ತರ ಕನ್ನಡ): ತಾಲ್ಲೂಕಿನ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ಪ್ರದಾನ ಮಾಡುವ 'ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ'ಯನ್ನು ಭರತನಾಟ್ಯ ಕಲಾವಿದೆ ಡಾ.ಪದ್ಮಾ ಸುಬ್ರಹ್ಮಣ್ಯ ಅವರಿಗೆ ಪ್ರಕಟಿಸಲಾಗಿದೆ. ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ. ಇದೇ ಮಂಡಳಿಯ 'ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ'ಗೆ ಪ್ರಸಿದ್ಧ ಯಕ್ಷಗಾನ ಚಂಡೆವಾದಕ ಕೃಷ್ಣ ಯಾಜಿ ಇಡಗುಂಜಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯಲ್ಲಿ ₹ 15 ಸಾವಿರ ನಗದು ಸೇರಿದೆ.