Job Description: ಬೆಳಗಾವಿ: ಜಿಲ್ಲೆಯ ಸವದತ್ತಿಯ ನಾಟಕಕಾರ ಝಕೀರ ನದಾಫ ಅವರಿಗೆ ನಾಟಕ ಅಕಾಡೆಮಿಯ 2019-20ನೇ ಸಾಲಿನ ರಂಗ ಪ್ರಶಸ್ತಿ ಲಭಿಸಿದೆ. ಕಳೆದ 23 ವರ್ಷಗಳಿಂದ ಸವದತ್ತಿಯಲ್ಲಿ ಪ್ರತಿವರ್ಷ 9 ದಿನಗಳ 'ಪರಸಗಡ ನಾಟಕೋತ್ಸವ'ವನ್ನು ಆಯೋಜಿಸಿಕೊಂಡು ಬಂದಿದ್ದಾರೆ. ಇದಲ್ಲದೇ, ಹತ್ತು ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. ಕೆಲವು ನಾಟಕಗಳಲ್ಲದೇ, ದೂರದರ್ಶನದ ಧಾರವಾಹಿಗಳಲ್ಲಿಯೂ ನಟಿಸಿದ್ದಾರೆ. ಭಕ್ತಿ ಗೀತೆಗಳ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ.