Job Description: ಬಾಗಲಕೋಟೆ: ವಿಶ್ವದ ಅತಿ ದೊಡ್ಡ ಕಾಳೇಶ್ವರ ಏತ ನೀರಾವರಿ ಯೋಜನೆಯ ಹರಿಕಾರ, ತೆಲಂಗಾಣ ಸರಕಾರದ ಜಲ ಸಂಪನ್ಮೂಲ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಕಾಶರಾವ್ ವೀರಮಲ್ಲ ಅವರು ಪ್ರಸಕ್ತ ಸಾಲಿನ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಕೊಡಮಾಡುವ ರಾಷ್ಟ್ರಮಟ್ಟದ ಬಸವ ಕೃಷಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಗರದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಈ ವಿಷಯ ಪ್ರಕಟಿಸಿದರು. ಜನವರಿ ೧೪ ರಂದು ಕೂಡಲಸಂಗಮದ ಬಸವಸಭಾ ಭವನದಲ್ಲಿ ನಡೆಯುವ ೧೦ನೇ ಕೃಷಿ ಸಂಕ್ರಾಂತಿ ಹಾಗೂ ಉತ್ತರ ಕರ್ನಾಟಕ ಸಮಗ್ರ ನೀರಾವರಿ ಕುರಿತು ನಾಡಿನ ರೈತ ಬಾಂಧವರ ಸಂವಾದದಲ್ಲಿ ಒಂದು ಲಕ್ಷ ರೂ.ಗಳ ನಗದು ಪುರಸ್ಕಾರ ಹಾಗೂ ತಾಮ್ರಪತ್ರ ಸ್ಮರಣಿಕೆಯನ್ನೊಳಗೊಂಡ ರಾಷ್ಟ್ರಮಟ್ಟದ ಬಸವಕೃಷಿ ಪ್ರಶಸಿಯನ್ನು ಪ್ರಕಾಶರಾವ್ ವೀರಮಲ್ಲ ಅವರಿಗೆ ನೀಡಿ ಗೌರವಿಸಲಾಗುವುದು