Job Description: ಟೆಲಿಕಾಂ ವಲಯದಲ್ಲಿ ಭಾರಿ ಸದ್ದು ಮಾಡಿರುವ ರಿಲಾಯನ್ಸ್ ಜಿಯೋ ಇದೀಗ ಇ-ಕಾಮರ್ಸ್ ಉದ್ಯಮಕ್ಕೆ ಕಾಲಿಟ್ಟಿದೆ. ಜಿಯೋ ಈ ಮೂಲಕ ಫ್ಲಿಪ್ಕಾರ್ಟ್, ಅಮೆಜಾನ್ ನಂತಹ ದೊಡ್ಡ ಇ-ಕಾಮರ್ಸ್ ತಾಣಗಳಿಗೆ ಶಾಕ್ ನೀಡಿದ್ದು, ಪ್ರಮುಖ ಇ-ಕಾಮರ್ಸ್ ತಾಣಗಳ ಲಿಸ್ಟಿಗೆ ಈಗ ಜಿಯೋ ಸೇರಿಕೊಂಡಿದೆ. ಸಂಸ್ಥೆಯು ತನ್ನ ಹೊಸ ಸೇವೆಯನ್ನು ಜಿಯೋಮಾರ್ಟ್ ಎಂದು ಹೇಳಿಕೊಂಡಿದೆ. ಜಿಯೋ ಸಂಸ್ಥೆಯು ಇ-ಕಾಮರ್ಸ್ ಸೇವೆಗೆ ಎಂಟ್ರಿ ಕೊಟ್ಟಿದ್ದು, ಅದಕ್ಕಾಗಿ ಜಿಯೋ ಮಾರ್ಟ್ ಆಪ್ ಅನ್ನು ಪರಿಚಯಿಸಿದೆ. ಈ ಸೇವೆಯಲ್ಲಿ ಒಟ್ಟು 50000 ದಷ್ಟು ದಿನಸಿ ಉತ್ಪನ್ನಗಳು ಲಭ್ಯವಾಗಲಿವೆ. ಗ್ರಾಹಕರು ಇಂತಿಷ್ಟೆ ಆರ್ಡರ್ ಮಾಬೇಕು ಎಂದೆನಿಲ್ಲ, ಯಾವುದೇ ಉತ್ಪನ್ನ ಖರೀದಿಸಿದರು ಉಚಿತ ಹೋಮ್ ಡೆಲಿವರಿ ಸೇವೆ ಸಿಗಲಿದೆ. ಸ್ಪೀಡ್ ಡೆಲಿವರಿ/ ಎಕ್ಸ್ಪ್ರೆಸ್ ಡೆಲಿವರಿ ಸೇವೆ ಸೇರುವ ಸಾಧ್ಯತೆಗಳಿವೆ.