Job Description: ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ಸೇನಾ ವ್ಯವಹಾರಗಳ ಇಲಾಖೆ ರಚಿಸಿದ್ದು, ‘ರಕ್ಷಣಾ ಪಡೆಗಳ ಮುಖ್ಯಸ್ಥ‘ರು (ಸಿಡಿಎಸ್) ಅದರ ಮುಖ್ಯಸ್ಥರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಸಿಡಿಎಸ್ ಮುಖ್ಯಸ್ಥರಾಗಿ ನೇಮಕವಾಗಿರುವ ಜನರಲ್ ಬಿಪಿನ್ ರಾವತ್ ನೇತೃತ್ವವಹಿಸಲಿದ್ದಾರೆ. ಹೊಸ ಇಲಾಖೆ ವ್ಯಾಪ್ತಿಯಲ್ಲಿ ಭೂ ಸೇನೆ, ವಾಯು ಮತ್ತು ನೌಕಾಪಡೆಯ ನೀತಿ, ಯೋಜನೆ ಮತ್ತು ಖರೀದಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.