Job Description: * ಜನವರಿ 13 ರಿಂದ ಒಡಿಶಾದಲ್ಲಿ ಹಾಕಿ ವಿಶ್ವಕಪ್ ಆರಂಭವಾಗಲಿದೆ. ಭಾರತವು ನಾಲ್ಕನೇ ಬಾರಿಗೆ ಈ ಪ್ರತಿಷ್ಠಿತ ಹಾಕಿ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಪಂದ್ಯಗಳು ನಡೆಯಲಿವೆ. ಇದು ಈ ಟೂರ್ನಿಯ 15ನೇ ಆವೃತ್ತಿಯಾಗಿದೆ. * ಜನವರಿ 13ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸುತ್ತಿವೆ. 16 ತಂಡಗಳನ್ನು ತಲಾ 4ರಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತವು ಇಂಗ್ಲೆಂಡ್, ವೇಲ್ಸ್ ಮತ್ತು ಸ್ಪೇನ್ ಜೊತೆಗೆ ಗುಂಪು-4 ರಲ್ಲಿ ಸ್ಥಾನ ಪಡೆದಿದೆ. ಅವರ ಮೊದಲ ಪಂದ್ಯ ಜನವರಿ 13 ರಂದು ರಾತ್ರಿ 7 ಗಂಟೆಗೆ ಸ್ಪೇನ್‌ ವಿರುದ್ಧ ನಡೆಯಲಿದೆ. 17 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 44 ಪಂದ್ಯಗಳು ನಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ಜನವರಿ 29ರಂದು ನಡೆಯಲಿದೆ.* ಹರ್ಮನ್ ಪ್ರೀತ್ ಸಿಂಗ್ ರವರು ಭಾರತ ತಂಡದ ನಾಯಕನಾಗಿದ್ದಾರೆ. ಇದು ಭಾರತದಲ್ಲಿ ನಡೆಯುತ್ತಿರುವ ನಾಲ್ಕನೇ ಆಯ್ಕೆ ವಿಶ್ವಕಪ್ ಟೂರ್ನಿಯಾಗಿದೆ. 41 ವರ್ಷಗಳ ಬಳಿಕ 2021 ರಲ್ಲಿ ಭಾರತವು ಟೋಕಿಯೋ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿತ್ತು. ಕಳೆದ ಬಾರಿ ಹಾಕಿ ವಿಶ್ವಕಪ್ ನಲ್ಲಿ ಬೆಲ್ಜಿಯಂ ಚಾಂಪಿಯನ್ ಆಗಿತ್ತು. ಈ ಬಾರಿ 2023 ರ ಹಾಕಿ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಅರ್ಹತೆ ಪಡೆದಿಲ್ಲ