Job Description: * ಭಾರತದ ಕೇಂದ್ರ ಸರ್ಕಾರದ್ದೇ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕುಲಾಂತರಿ ಸಾಸಿವೆಯನ್ನು ದೊಡ್ಡ ಮಟ್ಟದಲ್ಲಿಈ ಪರೀಕ್ಷೆಗೆ ಒಳಪಡಿಸಲು ಕೇಂದ್ರ ಪರಿಸರ ಸಚಿವಾಲಯವು ಅನುಮತಿ ನೀಡಿದೆ. ಕುಲಾಂತರಿ ಸಾಸಿವೆಯು ಶೇ.29 ರಷ್ಟು ಮತ್ತು ವರುಣಾ ತಳಿಗಳಿಗಿಂತ ಶೇ.19 ರಷ್ಟು ಹೆಚ್ಚು ಇಳುವರಿ ನೀಡುತ್ತವೆ ಎಂದು ತಿಳಿದು ಬಂದಿದೆ.* 2010-15 ರ ನಡುವೆ ನಡೆಸಲಾದ ಮೂರೂ ಪ್ರತ್ಯೇಕ ಅಧ್ಯಯನದಲ್ಲಿ ಕುಲಾಂತರಿ ಸಾಸಿವೆ ತಳಿಯು ಜೇನುನೊಣಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ತಿಳಿದು ಬಂದಿದೆ. * ಯಾವುದೇ ಕುಲಾಂತರಿ ತಳಿಯ ಅಭಿವೃದ್ಧಿ ಸಂದರ್ಭದಲ್ಲಿ ಅವುಗಳನ್ನು ಮೊದಲು ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈಗ ಡಿಎಂಎಚ್-11 "ಎನ್ವಿರಾನ್ಮೆಂಟಲ್ ರಿಲೀಸ್ ಸ್ಟಡಿ" ಹಂತದ ಪರೀಕ್ಷೆಗೆ ಅನುಮತಿ ಪಡೆದಿದೆ. * ವಿಜ್ಞಾನಿಗಳ ಪ್ರಮುಖ ಆಕ್ಷೇಪಗಳು : - ಅನುಮತಿ ನೀಡುವ ಮುನ್ನ ಸರ್ಕಾರದ ಸಂಸ್ಥೆಗಳ ಹೊರತಾಗಿ, ಸ್ವತಂತ್ರ ಸಂಸ್ಥೆ ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ. - ಕೆಲವೇ ತಳಿಗಳನ್ನು ಹೋಲಿಸಿ ಕುಲಾಂತರಿ ಸಾಸ್ವೆ ಇಳುವರಿ ಹೆಚ್ಚು ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಉಳಿದ ತಳಿಗಳು ಅದಕ್ಕಿಂತ ಹೆಚ್ಚು ಇಳಿವರಿ ಕೊಡುತ್ತವೆ ಅವುಗಳನ್ನು ಅಧ್ಯಯನಕ್ಕೆ ಪರಿಗಣಿಸಿಲ್ಲ. - ಈ ಸಾಸಿವೆಯಿಂದ ಪರಿಸರಕ್ಕಾಗುವ ಪರಿಣಾಮದ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿಲ್ಲ. ಜೇನುನೊಣಗಳ ಮೇಲೆ ಆಗುವ ಪರಿಣಾಮವನ್ನು ಕಡೆಗಣಿಸಲಾಗಿದೆ. * ಸರ್ಕಾರದ ಸಮರ್ಥನೆ - ಕುಲಾಂತರಿ ಸಾಸಿವೆಗೆ ಸಂಬಂಧಿಸಿದ ಅಧ್ಯಯನವನ್ನು 2016 ರಲ್ಲಿ ಸಂಬಂಧಿತ ಸಂಸ್ಥೆ ಮತ್ತು ಪರಿಸರ ಸಚಿವಾಲಯದ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗಿದೆ. - ಈ ಸಾಸಿವೆಯನ್ನು 30 ಕ್ಕೂ ಹೆಚ್ಚು ದೇಶಗಳಲ್ಲಿ ಬೆಳೆಯಲಾಗುತ್ತಿದ್ದು, ಇದು ಹೆಚ್ಚು ಇಳುವರಿಯನ್ನು ನೀಡುತ್ತದೆ ಎಂದು ಸಾಬೀತಾಗಿದೆ.