Job Description: * ಜನೆವರಿ 08 ರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ನಂತರ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾದ ಮಹೇಶ ಜೋಶಿಯವರು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಹೇಳಿದರು. * 9 ಜಿಲ್ಲೆಗಳಿಂದ ಸಮ್ಮೇಳನ ಸಂಘಟಿಸಬೇಕೆಂದು ಹಕ್ಕು ಮಂಡಿಸಿದ್ದರು. ಅತಿ ಹೆಚ್ಚು ಜನರಿಂದ ಮಂಡ್ಯ ಜಿಲ್ಲೆ ಎಂಬ ಒಮ್ಮತ ಬಂದಿದ್ದರಿಂದ ಮುಂದೆ ನಡೆಯಲಿರುವ ಸಮ್ಮೇಳನವು ಸಕ್ಕರೆ ನಾಡು ಎನಿಸಿಕೊಂಡಂತಹ ಮಂಡ್ಯ ಜಿಲ್ಲೆಯಲ್ಲಿ ಜರುಗಲಿದೆ ಎಂದು ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾದ ಮಹೇಶ ಜೋಶಿಯವರು ತಿಳಿಸಿದ್ದಾರೆ.