Job Description: * ಕೇಂದ್ರ ಸರ್ಕಾರವು 2016ರಲ್ಲಿ ಕೈಗೊಂಡಿದ್ದ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರವನ್ನು ಪರಿಶೀಲಿಸುವ, ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಸೋಮವಾರ ವಜಾಗೊಳಿಸಿದ್ದು, 4:1 ಬಹುಮತದ ತೀರ್ಪಿನ ಮೂಲಕ ಕೇಂದ್ರ ಕ್ರಮವನ್ನು ಎತ್ತಿಹಿಡಿದಿದೆ * ಬಹುಮತದ ಅಭಿಪ್ರಾಯವನ್ನು ಮಂಡಿಸಿದ ನ್ಯಾ. ಗವಾಯಿ ಅವರು " ಆರ್ಥಿಕ ಕ್ರಮಗಳ ವಿಚಾರದಲ್ಲಿ ಮಧ್ಯಪ್ರವೇಶಿಸುವಾಗ ಗಣನೀಯ ನಿಯಂತ್ರಣವಿರಬೇಕು. ಅಂತಹ ಕ್ರಮಗಳ ಹಿಂದಿನ ನಿರ್ಧಾರವನ್ನು ನಾವು ನ್ಯಾಯಿಕ ದೃಷ್ಟಿಯಿಂದ ನೋಡಲಾಗದು” ಎಂದರು.* 2016ರ ಅಪಮೌಲ್ಯೀಕರಣ ನಿರ್ಧಾರವನ್ನು ಮರು ಪರಿಶೀಲಿಸುವ ಸುಪ್ರೀಂಕೋರ್ಟ್‌ನ ಪ್ರಯತ್ನಕ್ಕೆ ಪ್ರತಿರೋಧ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟ ಪರಿಹಾರ ಇಲ್ಲದಿರುವಾಗ ಈ ವಿಷಯವನ್ನು ನಿರ್ಧರಿಸುವುದು ಸಾಧ್ಯವಿಲ್ಲ ಎಂದು ಹೇಳಿದೆ.