Job Description: * ಭಾರತದ ನೆರವಿನೊಂದಿಗೆ ಜಾರಿಗೆ ತಂದ 720 ಮೆಗಾವ್ಯಾಟ್‌ಗಳ ಮಂಗ್‌ಡೆಚು ಜಲವಿದ್ಯುತ್ ಯೋಜನೆಯನ್ನು ಇತ್ತೀಚೆಗೆ ಭೂತಾನ್‌ನ ಡ್ರಕ್ ಗ್ರೀನ್ ಪವರ್ ಕಾರ್ಪೊರೇಷನ್ (ಡಿಜಿಪಿಸಿ) ಗೆ ಹಸ್ತಾಂತರಿಸಲಾಯಿತು. ಈ ಹಸ್ತಾಂತರದೊಂದಿಗೆ ಉಭಯ ದೇಶಗಳು ನಾಲ್ಕು ಮೆಗಾ ಜಲವಿದ್ಯುತ್ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.* ಭಾರತ ಸರ್ಕಾರವು ಈ ಜಲವಿದ್ಯುತ್ ಯೋಜನೆಯ ನಿರ್ಮಾಣಕ್ಕೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಿತು. ಈ ಜಲವಿದ್ಯುತ್ ಯೋಜನೆಯ ಕಾರ್ಯಾರಂಭವು ಭೂತಾನ್‌ನ ವಿದ್ಯುತ್ ಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಶೇಕಡಾ 44 ರಷ್ಟು ಹೆಚ್ಚಿಸಿದೆ ಮತ್ತು ಇದು ಪ್ರಸ್ತುತ 2,326 ಮೆಗಾ ವ್ಯಾಟ್‌ನಲ್ಲಿದೆ.