Job Description: * ವೇಗದ ಬೌಲರ್ ಶಿಖಾ ಪಾಂಡೆ ಅವರು ಮಹಿಳಾ ಟಿ 20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಫೆಬ್ರುವರಿ 10 ರಿಂದ 26 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಒಟ್ಟು 15 ಸದಸ್ಯರನ್ನು ಒಳಗೊಂಡಂತೆ ತಂಡವನ್ನು ಡಿಸೇಂಬರ್ 28 ರಂದು ಪ್ರಕಟಿಸಲಾಯಿತು. * ಶಿಖಾ ಪಾಂಡೆಯವರು 2021 ಅಕ್ಟೋಬರ್ ನಲ್ಲಿ ಕೊನೆಯದಾಗಿ ರಾಷ್ಟೀಯ ತಂಡಕ್ಕೆ ಆಟವಾಡಿದ್ದರು. 33 ವರ್ಷದ ಶಿಖಾ ರವರು ಒಟ್ಟಾರೆ 55 ಏಕದಿನ ಪಂದ್ಯ ಹಾಗೂ 56 ಟಿ 20 ಪಂದ್ಯಗಳನ್ನು ಆಡಿದ್ದಾರೆ.