Job Description: * ಅಳಿವಿನಂಚಿನಲ್ಲಿರುವ ಬೂದು ಬಣ್ಣದ ತೋಳವೊಂದು ಜಾರ್ಖಂಡ್‌ನ ಕೊಡೆರ್ಮಾ ದಲ್ಲಿ ಮೊಟ್ಟ ಮೊದಲ ಬಾರಿಗೆ ಪತ್ತೆಯಾಗಿದೆ. ಈ ತೋಳಗಳು ಹೆಚ್ಚಾಗಿ ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಕಂಡು ಬರುತ್ತವೆ.* ಕೊಡೆರ್ಮಾ ಮತ್ತು ಹಜಾರಿಬಾಗ್ ವನ್ಯಜೀವಿ ವಿಭಾಗಗಳಲ್ಲಿ ಸಮೀಕ್ಷೆ ನಡೆಸುತ್ತಿರುವ ಡೆಹ್ರಾಡೂನ್ ಮೂಲದ ವೈಲ್ಡ್‌ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ 10 ಸದಸ್ಯರ ತಂಡ ಜಾರ್ಖಂಡ್‌ನಲ್ಲಿ ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿನ ತೊಂದರೆಯಿಂದಾಗಿ ಸದ್ಯಕ್ಕೆ ಭಾರತದಲ್ಲಿ ಭಾರತೀಯ ಬೂದು ತೋಳಗಳ (ಕ್ಯಾನಿಸ್ ಲೂಪಸ್ ) ಸಂಖ್ಯೆ ಸುಮಾರು 2,000ಕ್ಕೆ ಕುಸಿದಿದೆ ಎಂದು ವರದಿಗಳು ಸೂಚಿಸುತ್ತವೆ.