Job Description: * ಡಿಸೇಂಬರ್ 08 ರಂದು ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಪಕ್ಷವು ಅತೀ ಹೆಚ್ಚು ಮತಕ್ಷೇತ್ರಗಳಲ್ಲಿ ಜಯಸಾಧಿಸಿದೆ.* ಗುಜರಾತ್ ನ ಒಟ್ಟು 182 ಮತಕ್ಷೇತ್ರಗಳ ಪೈಕಿ ಪಿಜೆಪಿ ಪಕ್ಷವು 156 ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅತೀ ಹೆಚ್ಚು ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೆಯೇ ಕಾಂಗ್ರೆಸ್ 17 ಮತಕ್ಷೇತ್ರದಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.* ಆಮ್ ಆದ್ಮಿ ಪಕ್ಷವು 182 ಮತಕ್ಷೇತ್ರಗಳ ಪೈಕಿ 5 ಮತಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರದಿಂದ 3 ಮತಕ್ಷೇತ್ರಗಳಲ್ಲಿ ಗೆಲುವಾಗಿದೆ.* ಪಿಜೆಪಿ ಪಕ್ಷವು ಅತೀ ಹೆಚ್ಚು ಮತಕ್ಷೇತ್ರದಿಂದ ಗೆಲುವು ಸಾಧಿಸಿರುವದರಿಂದ ಬಿಜೆಪಿ ಪಕ್ಷದ ನಾಯಕರಾದ ಭೂಪೇಂದ್ರ ಪಟೇಲ್ ರವರು ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ತಿಳಿಸಿದ್ದಾರೆ. ಡಿಸೇಂಬರ್ 12 ರಂದು ಭೂಪೇಂದ್ರ ಪಟೇಲ್ ರವರು ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ತಿಳಿಸಿದ್ದಾರೆ.