Job Description: * ಪೋರ್ಬ್‌ನ ಏಷ್ಯಾದ ಅಗ್ರಗಣ್ಯ ದಾನಿಗಳ ಪಟ್ಟಿಯಲ್ಲಿ ಭಾರತದ ಮೂವರು ಕೋಟ್ಯಧೀಶರು ಇದ್ದಾರೆ. ಅದಾನಿ ಸಮೂಹದ ಅಧ್ಯಕ್ಷ ಗೌತಮ್‌ ಅದಾನಿ, ಎಚ್‌ಸಿಎಲ್‌ ಸಂಸ್ಥಾಪಕ ಶಿವ ನಾಡ‌ ಮತ್ತು ಹ್ಯಾಪಿಯಸ್ ಮೈಂಡ್ ಟೆಕ್ನಾಲಜಿಸ್‌ನ ಅಧ್ಯಕ್ಷ ಅಶೋಕ್ ಸೂತಾ ಅವರನ್ನು 16ನೇ ಆವೃತ್ತಿಯ 'ಪೋರ್ಟ್ಸ್ ಏಷ್ಯಾ ಅಗ್ರಗಣ್ಯ ಪರೋಪಕಾರದ ಹೀರೋ' ಪಟ್ಟಿಯಲ್ಲಿ ಗುರುತಿಸಿದೆ.* ಅದಾನಿ 60 ಸಾವಿರ ಕೋಟಿ ರೂಪಾಯಿಗಳನ್ನು ದಾನ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನು ಆರೋಗ್ಯ, ಶಿಕ್ಷಣ, ಕೌಶಲ ಅಭಿವೃದ್ಧಿ ವಲಯದಲ್ಲಿ ಅದಾನಿ ಕೌಟುಂಬಿಕ ಪ್ರತಿಷ್ಠಾನದ ಮೂಲಕ ಹಂಚಲಾಗುವುದು ಎಂದು ಹೇಳಿದ್ದರು. * 1996ರಲ್ಲಿ ಸ್ಥಾಪನೆಯಾದ ಈ ಪ್ರತಿಷ್ಠಾನ ಪ್ರತಿವರ್ಷ 37 ಲಕ್ಷ ಜನರಿಗೆ ನೆರವು ನೀಡುತ್ತದೆ. ಶಿವ ನಾಡ‌, ಭಾರತದಲ್ಲಿ ದೊಡ್ಡಮಟ್ಟದಲ್ಲಿ ದಾನದತ್ತಿಗಳನ್ನು ನೀಡುವ ಉದ್ಯಮಿ. ಈ ವರ್ಷ 11,600 ಕೋಟಿ ರೂ.ಗಳ ದಾನ ನೀಡಿದ್ದಾರೆ. 1994ರಲ್ಲಿ ಶಿವ ನಾಡ‌ ಪ್ರತಿಷ್ಠಾನ ಸ್ಥಾಪಿತವಾಯಿತು.* ನರಸಂಬಂಧಿ ರೋಗದಿಂದ ಬಳಲುವ ಹಿರಿಯರಿಗೆ ಪರಿಹಾರ ಕಂಡುಹಿಡಿಯುವ ವೈದ್ಯಕೀಯ ಸಂಶೋಧನೆಗಾಗಿ 600 ಕೋಟಿ ರೂಪಾಯಿಯನ್ನು ಅಶೋಕ್‌ ಸೂತಾ ದಾನ ಮಾಡಿದ್ದಾರೆ. 200 ಕೋಟಿ ರೂ.ಗಳ ಆರಂಭಿಕ ದತ್ತಿಯ ಮೂಲಕ 2021ರಲ್ಲಿ ಎಸ್‌ಕೆಎಸ್‌ ಸಂಸ್ಥೆಯನ್ನು ಬೆಂಗಳೂರು ಮೂಲದ ಉದ್ಯಮಿ ಆರಂಭಿಸಿದ್ದಾರೆ.* ಕೌಲಾಲಂಪುರ್‌ದಲ್ಲಿ ಈಕ್ವಿಟಿ ಸಂಸ್ಥೆ ಕ್ರೀಡರ್‌ ಸ್ಥಾಪಿಸಿರುವ ಬ್ರಹ್ಮಲ್ ವಾಸುದೇವನ್ ಮತ್ತು ಅವರ ವಕೀಲ ಪತ್ನಿ ಶಾಂತಿ ಕಂಡಿಯಾ ಕ್ರೀಡರ್‌ ಪ್ರತಿಷ್ಠಾನ ಕಳೆದ ಮೇ ತಿಂಗಳಲ್ಲಿ ಸರಿಸುಮಾರು 100 ಕೋಟಿ ರೂಪಾಯಿ ದಾನವನ್ನು ಘೋಷಿಸಿದೆ.