Job Description: * ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾದೊಂದಿಗೆ ಮಾರ್ಚ್ 2024ಕ್ಕೆ ವಿಸ್ತಾರ (Vistara Airline) ಏರ್ಲೈನ್ನ್ನು ವಿಲೀನಗೊಳಿಸಲಾಗುವುದು ಎಂದು ಸಿಂಗಾಪುರ್ ಏರ್‌ಲೈನ್ಸ್ ತಿಳಿಸಿದೆ. * ಟಾಟಾ ಸಮೂಹವು ವಿಸ್ತಾರಾದಲ್ಲಿ 51 ಪ್ರತಿಶತ ಪಾಲನ್ನು ಹೊಂದಿದೆ ಮತ್ತು ಉಳಿದ 49 ಶೇಕಡಾ ಷೇರುಗಳು ಸಿಂಗಾಪುರ್ ಏರ್‌ಲೈನ್ಸ್ (ಎಸ್‌ಐಎ) ನಲ್ಲಿದೆ. ವಹಿವಾಟಿನ ಭಾಗವಾಗಿ, ಎಸ್‌ಐಎ ಏರ್ ಇಂಡಿಯಾದಲ್ಲಿ 2,058.5 ಕೋಟಿ ರೂ. ಹೂಡಿಕೆ ಮಾಡಿದೆ.* ಟಾಟಾ ಸನ್ಸ್, ಸಿಂಗಾಪುರ್ ಏರ್‌ಲೈನ್ಸ್ ಮಾರ್ಚ್ 2024ಕ್ಕೆ ಏರ್ ಇಂಡಿಯಾ ಮತ್ತು ವಿಸ್ತಾರ (Vistara Airline) ಏರ್ಲೈನ್ ಬ್ರ್ಯಾಂಡ್ಗಳನ್ನು ವಿಲೀನಗೊಳ್ಳಲಿದೆ.* ವಿಸ್ತಾರ ಏರ್ಲೈನ್ ಬ್ರ್ಯಾಂಡ್ ಅನ್ನು ರದ್ದುಗೊಳಿಸುವುದು ಮತ್ತು ನಾಲ್ಕು ಏರ್ಲೈನ್ಗಳನ್ನು ಏರ್ ಇಂಡಿಯಾದೊಂದಿಗೆ (Air India) ವಿಲೀನಗೊಳಿಸಲು ಟಾಟಾ ಸಮೂಹ (Tata Group) ಚಿಂತನೆ ನಡೆಸಿದೆ. * ಈ ಮೂಲಕ ತನ್ನ ಕುಂಟುತ್ತಾ ಸಾಗುತ್ತಿರುವ ವಿಮಾನಯಾನ ಸಾಮ್ರಾಜ್ಯವನ್ನು ಮರುನಿರ್ಮಾಣ ಮಾಡಲು ಮತ್ತು ವಿಸ್ತರಿಸಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.* ಸಿಂಗಾಪುರ ಏರ್ಲೈನ್ಸ್ನ ದಕ್ಷಿಣ ಏಷ್ಯಾದ ಸ್ಥಳೀಯ ಸಂಸ್ಥೆಯಾದ ವಿಸ್ತಾರ ಬ್ರ್ಯಾಂಡ್ ಅನ್ನು ರದ್ದುಗೊಳಿಸಲೂ ಟಾಟಾ ಚಿಂತನೆ ನಡೆಸಿತ್ತು. ಸಂಯೋಜಿತ ಏರ್ಲೈನ್ಸ್ನ ಎಷ್ಟು ಷೇರುಗಳನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಸಿಂಗಾಪುರ ಏರ್ಲೈನ್ಸ್ ಮೌಲ್ಯಮಾಪನ ಮಾಡುತ್ತಿದೆ.* ಟಾಟಾ ಮಾಲೀಕತ್ವ ವಹಿಸಿಕೊಂಡ ಬಳಿಕ ಏರ್ ಇಂಡಿಯಾ ತನ್ನ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆಗೆ ಮುಂದಾಗಿದೆ. * 300 ಸಣ್ಣ ಜೆಟ್ಗಳ ಖರೀದಿಗೆ ಚಿಂತನೆ ನಡೆಸಿದೆ. ಇದು ಸಾಕಾರಗೊಂಡಲ್ಲಿ ವಿಮಾನಯಾನ ಇತಿಹಾಸದಲ್ಲೇ ಅತಿದೊಡ್ಡ ಖರೀದಿಯಾಗಲಿದೆ ಎಂದು ಹೇಳಲಾಗಿದೆ. * ಈಗ ವಿಮಾನಯಾನ ಸಂಸ್ಥೆಯು 113 ವಿಮಾನಗಳನ್ನು ಹೊಂದಿದ್ದು, ಇದನ್ನು ಮುಂದಿನ ಐದು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿಸಲಾಗುವುದು ಎಂದು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಲ ಚಾಂಪ್ಬೆಲ್ ವಿಲ್ಸನ್ ಇತ್ತೀಚೆಗೆ ಹೇಳಿದ್ದರು.* 5 ಶತಕೋಟಿ ಡಾಲರ್ ಮೌಲ್ಯದ ಕ್ಯಾರಿಯರ್ಗಳನ್ನು ಹೊಂದುವ ಸಲುವಾಗಿ 1 ಶತಕೋಟಿ ಡಾಲರ್ ಫಡಿಂಗ್ ಸಂಗ್ರಹಿಸುವ ಬಗ್ಗೆಯೂ ಏರ್ ಇಂಡಿಯಾ ಚಿಂತನೆ ನಡೆಸಿದೆ ಎಂದು ಬೆಳವಣಿಗೆಗಳ ಬಗ್ಗೆ ಹೇಳಲಾಗಿದೆ.* 25 ಏರ್ಬಸ್ ಎಸ್ಇ ಮತ್ತು 5 ಬೋಯಿಂಗ್ ಏರ್ಕ್ರಾಫ್ಟ್ಗಳನ್ನು ಹೊಂದುವ ಗುರಿಯನ್ನೂ ಏರ್ಲೈನ್ಸ್ ಹೊಂದಿದೆ.