Job Description: * ಕ್ರೀಡಾಲೋಕದ ದಂತಕಥೆ ಪಿ.ಟಿ ಉಷಾ ಭಾರತ ಒಲಂಪಿಕ್ ಸಂಸ್ಥೆಯ (ಐಒಎ) ಮೊದಲ ಅಧ್ಯಕ್ಷೆಯವದು ಖಚಿತವಾಗಿದೆ. * ಒಂಬತ್ತು ದಶಕಗಳಿಂದ ಹಳೆಯದಾದ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೇರುತ್ತಿರುವ ಮೊದಲ ಒಲಂಪಿಯನ್ ಹಾಗೂ ಅಂತರ ರಾಷ್ಟೀಯ ಪದಕ ವಿಜೇತರೂ ಆಗಿದ್ದರೆ.* ಡಿಸೇಂಬರ್ 10 ರಂದು ನಿಗದಿಯಾಗಿರುವ ಚುನಾವಣೆಯ ಅಧ್ಯಕ್ಷ ಹುದ್ದೆಗೆ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. * ಉಷಾ ರವರು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದರು. 1984 ರ ಲಾಸ್ ಏಂಜಲೀಸ್ ಒಲಂಪಿಕ್ಸ್ 400 ಮೀ. ಹರ್ಡಲ್ಸ್ ನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. * (ಐಒಎ) 95 ವರ್ಷದ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿರುವ ಮೊದಲ ಒಲಂಪಿಯನ್ ಮತ್ತು ಅಂತಾರಾಷ್ಟ್ರೀಯ ಪದಕ ವಿಜೇತೆ ಎಂಬ ಗೌರವ ಉಷಾ ಅವರದ್ದಾಗಿದೆ.