Job Description: * ಆಗಸ್ಟ್‌ನಲ್ಲಿ ಶೇ. 75 ಅನುಮೋದನೆಯೊಂದಿಗೆ ಮೊದಲ ಸ್ಥಾನ ಗಳಿಸಿದ್ದ ಪ್ರಧಾನಿ ಮೋದಿ, ಈ ಬಾರಿ ಶೇ. 77 ರೊಂದಿಗೆ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. * ಆಗಸ್ಟ್‌ನಲ್ಲಿ ಮೆಕ್ಸಿಕೊ ಅಧ್ಯಕ್ಷ ಅಂಡ್ರಸ್ ಮ್ಯಾನುಯೆಲ್ ಲೊಪೆಜ್ ಒಬ್ರಡೋ‌ ಮತ್ತು ಇಟಲಿ ಪ್ರಧಾನಿ ಮಾಡಿಯೋ ಡಾಫಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದರು. 2022 ನವೆಂಬರ್ ಜನವರಿ ಮತ್ತು 2021 ನಲ್ಲಿ ಕೂಡ ಮೋದಿ ಜನಪ್ರಿಯ ವಿಶ್ವನಾಯಕರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದರು.* ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮುಖಂಡರ ಪಟ್ಟಿಯಲ್ಲಿ ಮತ್ತೊಮ್ಮೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶೇಕಡ 77 ಜನರು ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದಾರೆ.* ಶೇ. 56 ಮತಗಳೊಂದಿಗೆ ಆಸ್ಟ್ರೇಲಿಯಾ ಪ್ರಧಾನಿ ಅಂದೋನಿ ಅಲ್ಪನೀಸ್ ಮತ್ತು ಶೇ. 41 ರೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಇದ್ದಾರೆ. * ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರೊಡೋ (ಶೇ. 38) ಹಾಗೂ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ (ಶೇ. 36) ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ. ಶೇ. 23 ಅನುಮೋದನೆಯೊಂದಿಗೆ ಜಪಾನ್ ಪ್ರಧಾನಿ ಪುಮಿಯೊ ಕಿಷಿದಾ 5 ನೇ ಸ್ಥಾನ ಗಳಿಸಿದ್ದಾರೆ.* ಹಲವು ದೇಶಗಳಲ್ಲಿ ಸಮೀಕ್ಷೆ: ನಾಯಕರ ಅನುಮೋದನೆ ರೇಟಿಂಗ್ ಮತ್ತು ದೇಶಗಳ ಪ್ರಗತಿಯ ಹಾದಿಗಮನಿಸುವ ಮಾರ್ನಿಂಗ್ ಕನ್ಸಲ್ ಇಂಟೆಲಿಜೆನ್ಸ್‌ ಗ್ರೂಪ್ ಈ ಸಮೀಕ್ಷೆ ನಡೆಸಿದೆ. ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೊ, ದಕ್ಷಿಣ ಕೊರಿಯಾ, ನೆದರ್ಲೆಂಡ್, ಸ್ಪೇನ್, ಸ್ವೀಡನ್, ಅಮೆರಿಕದಲ್ಲಿ ಸಮೀಕ್ಷೆ ನಡೆಸಲಾಗಿದೆ.* ರಿಯಲ್ ಟೈಮ್ ಡೇಟಾ : ರಾಜಕೀಯ ಚುನಾವಣಿಗಳು, ಚುನಾಯಿತ ಮುಖಂಡರು ಮತ್ತು ಮತದಾನ ವಿಚಾರಗಳಲ್ಲಿ ಮಾರ್ನಿಂಗ್ ಕನ್ಸಲ್ ವೇದಿಕೆ ರಿಯಲ್ ಟೈಮ್ ಡೇಟಾ ಒದಗಿಸುತ್ತದೆ. * ಈ ವೇದಿಕೆ ಪ್ರತಿ ದಿನ 20,000 ಕ್ಕೂ ಅಧಿಕ ಜಾಗತಿಕ ಸಂದರ್ಶನಗಳನ್ನು ನಡೆಸುತ್ತದೆ. ಅಮೆರಿಕದಲ್ಲಿ ಸರಾಸರಿ ಸ್ಯಾಂಪಲ್ ಗಾತ್ರ ಸುಮಾರು 45,000 ಆಗಿದೆ. ಇತರ ದೇಶಗಳಲ್ಲಿ ಅಂದಾಜು 500 ರಿಂದ 5,000 ಆಗಿದೆ.* ದೇಶಗಳಲ್ಲಿ ವ್ಯಕ್ತಿಯ ಶಿಕ್ಷಣ ಆಧರಿಸಿ ಸಮೀಕ್ಷೆಯಲ್ಲಿ ಅಂಕ ನೀಡಲಾಗುತ್ತದೆ. * ಅಮೆರಿಕದಲ್ಲಿ ಸಮೀಕ್ಷೆಗಳಲ್ಲಿ ಯಾವಾಗಲೂ ಜನಾಂಗೀಯತೆಯ ಮೇಲೆ ಅಂಕ ಕೇಂದ್ರೀಕೃತವಾಗಿರುತ್ತದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರು ತಮ್ಮ ದೇಶಕ್ಕೆ ಹೊಂದುವ ಭಾಷೆಯಲ್ಲಿ ಈ ಸಮೀಕ್ಷೆಗಳನ್ನು ಪೂರ್ಣಗೊಳಿಸುತ್ತಾರೆ.