Job Description: * ನ. 20- ಭಾರತ ರಾಷ್ಟ್ರೀಯ ತಂಡದ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರಗೆ 5 ವರ್ಷಗಳ ನಂತರ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಗಿದೆ.* ಚೇತೇಶ್ವರ ಪೂಜಾರ ಕ್ರಿಕೆಟ್ ರಂಗದಲ್ಲಿ ತೋರಿದ ಸಾಧನೆ ಪರಿಗಣಿಸಿ 2017ರಲ್ಲಿ ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಬಿಡುವಿಲ್ಲದ ಕ್ರಿಕೆಟ್ ಸರಣಿಯಿಂದಾಗಿ ಪೂಜಾರ ಅವರು ಈ ಪ್ರಶಸ್ತಿ ಪಡೆಯಲು ಆಗಿರಲಿಲ್ಲ.* ಕೇಂದ್ರ ಕ್ರೀಡಾ ಸಚಿವ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಚೇತೇಶ್ವರ ಪೂಜಾರಗೆ ಅರ್ಜುನ ಪ್ರಶಸ್ತಿ ನೀಡಿದ್ದಾರೆ. * ಪ್ರಶಸ್ತಿ ಸ್ವೀಕರಿಸಿದ ಕ್ರಿಕೆಟಿಗ ಚೇತೇಶ್ವರ ಪೂಜಾರ, ಟ್ವೀಟ್ ಮೂಲಕ ಸಂತಸ ವ್ಯಕ್ತ ಪಡಿಸಿದ್ದು, "ನನ್ನ ಸುದೀರ್ಘವಾದ ಕ್ರಿಕೆಟ್ ಸರಣಿಯಿಂದಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ, ಆದರೆ ಕೊನೆಗೂ ನಾನು ಆ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಸಂತಸವಾಗುತ್ತಿದೆ". ಎಂದು ಚೇತೇಶ್ವರ್ ರವರು ಹೇಳಿದರು.* ಈ ಪ್ರಶಸ್ತಿಗೆ ನನ್ನ ಹೆಸರನ್ನು ಶಿಫಾರಸ್ಸು ಮಾಡಿದ ಭಾರತೀಯ ಕ್ರೀಡಾ ಸಂಸ್ಥೆ, ಬಿಸಿಸಿಐ ಹಾಗೂ ಪ್ರಶಸ್ತಿ ನೀಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‍ಗೆ ನನ್ನ ಹೃತ್ಪೂರ್ವಕ ಧನ್ಯವಾದ’ ತಿಳಿಸುತ್ತೇನೆ ಎಂದು ಪೂಜಾರ ಹೇಳಿದ್ದಾರೆ.* ಪೂಜಾರ ಅವರು ಇತ್ತೀಚೆಗೆ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿದ್ದು, ಮುಂದಿನ ತಿಂಗಳು ಬಾಂಗ್ಲಾದೇಶ ನಡೆಯಲಿರುವ 2 ಟೆಸ್ಟ್ ಪಂದ್ಯಗಳಲ್ಲಿ ಭಾರತ ಎ ತಂಡವನ್ನು ಪ್ರತಿನಿಸಲಿದ್ದಾರೆ.* 96 ಟೆಸ್ಟ್ ಪಂದ್ಯಗಳಲ್ಲಿ ಚೇತೇಶ್ವರ ಪೂಜಾರ 6792 ರನ್ ಹಾಗೂ 5 ಏಕದಿನ ಪಂದ್ಯಗಳಿಂದ 51 ರನ್ ಗಳಿಸಿದ್ದಾರೆ.