Job Description: * ವಿಶ್ವ ಶೌಚಾಲಯ ದಿನವನ್ನು ಪ್ರತಿವರ್ಷ ನವೆಂಬರ್ 19 ರಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಹೊಸ ಹೊಸ ಥೀಮ್‌ನೊಂದಿಗೆ ವಿಶ್ವ ಶೌಚಾಲಯ ದಿನವನ್ನು ಆಚರಣೆ ಮಾಡಲಾಗುತ್ತದೆ. * 2022ರ ವಿಶ್ವ ಶೌಚಾಲಯ ದಿನದ ಥೀಮ್ " ನೈರ್ಮಲ್ಯ ಮತ್ತು ಅಂತರ್ಜಲ" ವನ್ನು ಕಾಪಾಡುವುದು.* ವಿಶ್ವಸಂಸ್ಥೆ ಜಾಗತಿಕ ನೈ,ರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯಿಂದ 'ವಿಶ್ವ ಶೌಚಾಲಯ ದಿನ' ವನ್ನು ಘೋಷಣೆ ಮಾಡಲಾಯಿತು* 2030 ರ ವೇಳೆಗೆ ವಿಶ್ವದ ಎಲ್ಲ ವೈಕ್ತಿಯೂ ಸುರಕ್ಷಿತ ಶೌಚಾಲಯ ಹೊಂದುವಂತೆ ಮಾಡುವುದು ವಿಶ್ವ ಸಂಸ್ಥೆಯ ಗುರಿಯಾಗಿದೆ.* ಜಾರ್ಖಂಡ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಒಂದು ವಿಶೇಷ ತರಬೇತಿ ಕೊಡುತ್ತಿದೆ. ಅವರನ್ನು ರಾಣಿ ಮೇಸ್ತ್ರಿ ಎಂದು ಕರೆಯಲಾಗುತ್ತದೆ. ಈ ಹೆಣ್ಣು ಮಕ್ಕಳು ತಮ್ಮ ತಮ್ಮ ಸಮುದಾಯಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ತರಬೇತಿಯನ್ನು ಪಡೆದು ಅದನ್ನು ಸಮುದಾಯದ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲಿದ್ದಾರೆ.