Job Description: * ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಕಂಪನಿಗಳ ಮಾಲೀಕ ಸಂಸ್ಥೆ ಮೆಟಾದ ಭಾರತೀಯ ವ್ಯವಹಾರಗಳ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್‌ ನೇಮಕಗೊಂಡಿದ್ದಾರೆ. * ಇತ್ತೀಚಿಗಷ್ಟೇ ಮೆಟಾ ಇಂಡಿಯಾದ ಮುಖ್ಯಸ್ಥ ಹುದ್ದೆ ತೊರೆದಿದ್ದ ಅಜಿತ್‌ ಮೋಹನ್‌ ಸ್ಥಾನಕ್ಕೆ ಇವರ ನೇಮಕವಾಗಿದೆ.* ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಸೇರಿದಂತೆ ಹಲವು ದೈತ್ಯ ಉತ್ಪನ್ನಗಳ ಒಡೆತನವನ್ನು ಹೊಂದಿರುವ 'ಮೆಟಾ' ಸಂಸ್ಥೆಯ ಭಾರತದ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್‌ ನೇಮಕಗೊಂಡಿದ್ದಾರೆ.* ಇತ್ತೀಚಿಗಷ್ಟೇ ಮೆಟಾ ಇಂಡಿಯಾದ ಮುಖ್ಯಸ್ಥರಾಗಿದ್ದ ಅಜಿತ್‌ ಮೋಹನ್‌ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಸಂಧ್ಯಾ ದೇವನಾಥನ್‌ ಅವರನ್ನು ನೇಮಿಸಲಾಗಿದೆ.* 2023 ರ ಜನವರಿ 1 ರಿಂದ ಸಂಧ್ಯಾ ಅಧಿಕಾರ ಸ್ವೀಕರಿಸಲಿದ್ದಾರೆ. ಸಂಧ್ಯಾ ದೇವನಾಥನ್‌ ಅವರು ಏಷ್ಯಾ ಫೆಸಿಫಿಕ್‌ ವಲಯದ ನಾಯಕತ್ವ ತಂಡದ ಭಾಗವಾಗಿರುತ್ತಾರೆ. * ಭಾರತದಲ್ಲಿ ಮೆಟಾ ಸಂಸ್ಥೆಯ ಉತ್ಪನ್ನಗಳ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು 2016 ರಿಂದಲೇ ಮೆಟಾದಲ್ಲಿ (ಹಿಂದೆ ಫೇಸ್‌ಬುಕ್‌) ಕಾರ್ಯನಿರ್ವಹಿಸುತ್ತಿದ್ದಾರೆ. * ಪ್ರಸ್ತುತ ಫೇಸ್‌ಬುಕ್‌ನ ದಕ್ಷಿಣ ಏಷ್ಯಾದ ಇ-ಕಾಮರ್ಸ್‌ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಈ ವೇಳೆ ವಿಯೆಟ್ನಾಂ ಮತ್ತು ಸಿಂಗಾಪುರದಲ್ಲಿ ಫೇಸ್‌ಬುಕ್‌ ಬಿಸಿನೆಸ್‌ ಹೆಚ್ಚಿಸುವಲ್ಲಿ ಹಾಗೂ ಅಸಾಧಾರಣ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಭಾರತದ ಮುಖ್ಯಸ್ಥೆಯಾಗುವ ಹಂತಕ್ಕೆ ಬೆಳೆದಿದ್ದಾರೆ.* ಸಂಸ್ಥೆಯ ವ್ಯಾಪಾರ ಮತ್ತು ಆದಾಯದ ಆದ್ಯತೆಗಳನ್ನು ಒಟ್ಟಿಗೆ ತರಲು ಮತ್ತು ದೀರ್ಘಾವಧಿಯ ಬೆಳವಣಿಗೆಯನ್ನು ಬೆಂಬಲಿಸಲು ಅವರನ್ನು ಮೆಟಾ ನಿಯೋಜಿಸಿದೆ. * ಸಂಧ್ಯಾ ದೇವನಾಥನ್‌ ಅವರು ಬ್ಯಾಂಕಿಂಗ್‌, ಪಾವತಿ ಹಾಗೂ ತಂತ್ರಜ್ಞಾನದಲ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನ ನಡೆಸಿದ್ದು, 22 ವರ್ಷಗಳ ಅನುಭವವನ್ನು ಹೊಂದಿದ್ದಾರೆ.* ''ಭಾರತವು ಡಿಜಿಟಲ್‌ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಮೆಟಾ ನಮ್ಮ ಹಲವಾರು ಉನ್ನತ ಉತ್ಪನ್ನಗಳಾದ ರೀಲ್ಸ್‌ ಹಾಗೂ ಬಿಸಿನೆಸ್‌ ಮೆಸೇಜಿಂಗ್‌ ಅನ್ನು ಭಾರತದಲ್ಲಿ ಮೊದಲು ಬಿಡುಗಡೆ ಮಾಡಿದೆ. * ಸಂಧ್ಯಾ ಅವರನ್ನು ಭಾರತಕ್ಕೆ ನಮ್ಮ ಹೊಸ ನಾಯಕಿಯಾಗಿ ಸ್ವಾಗತಿಸಲು ಸಂತೋಷವಾಗಿದೆ. ಸಂಧ್ಯಾ ಅವರು ಅಸಾಧಾರಣ ಮತ್ತು ಇನ್‌ಬಿಲ್ಟ್‌ ತಂಡಗಳನ್ನು ರೂಪಿಸುವಲ್ಲಿ ತಜ್ಞತೆ ಹೊಂದಿದ್ದಾರೆ.* ಉತ್ಪನ್ನ ನಾವೀನ್ಯತೆ ಮತ್ತು ಬಲವಾದ ಪಾಲುದಾರಿಕೆಗಳನ್ನು ನಿರ್ಮಿಸುವುದರಲ್ಲಿ ಈಗಾಗಲೇ ತಮ್ಮನ್ನು ಸಾಬೀತು ಮಾಡಿಕೊಂಡ ದಾಖಲೆ ಹೊಂದಿದ್ದಾರೆ,'' ಎಂದು ಮೆಟಾದ ಮುಖ್ಯ ವ್ಯಾಪಾರ ಅಧಿಕಾರಿ ಮನೆರ್‌ ಲೆವಿನ್‌ ಹೇಳಿದ್ದಾರೆ.