Job Description: * ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶೃಂಗ ಸಭೆಯನ್ನು ಉದ್ಧೇಶಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರವರ ಮುಂದೆ "ಇದು ಯುದ್ಧದ ಯುಗವಲ್ಲ" ಎಂಬುದಾಗಿ ಹೇಳಿದರು.* G-20 Summit: ಮುಂದಿನ ಅವಧಿಗೆ ಜಿ - 20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಭಾರತಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಸಾಂಕೇತಿಕವಾಗಿ ಅಧ್ಯಕ್ಷತೆಯನ್ನು ಪ್ರಧಾನಿಗೆ ಹಸ್ತಾಂತರಿಸಲಿದ್ದಾರೆ.* ಡಿಸೆಂಬರ್ 1 ರಿಂದ ಅಧಿಕೃತವಾಗಿ ಅಧ್ಯಕ್ಷಿಯ ಕಾರ್ಯಭಾರ ಹೊರಲಿರುವ ಭಾರತ, ಮುಂದಿನ ಒಂದು ವರ್ಷ ಜಿ - 20 ಶೃಂಗಸಭೆಯ ಆತಿಥ್ಯ ವಹಿಸಿಕೊಳ್ಳಲಿದೆ. ಭಾರತದಲ್ಲಿ ನಡೆಯುವ ಜಿ - 20 ಸಭೆಗೆ ಈಗಾಗಲೇ ಸರಕಾರ ಸಿದ್ಧತೆ ನಡೆಸಿದೆ. ಒಂದು ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ 200 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ.* ಒಂದು ಶೃಂಗ ಸಭೆ, 2 ದಿನ, 45 ಗಂಟೆ, 20 ಪ್ರಮುಖ ಕಾರ್ಯಕ್ರಮಗಳು, ವಿಶ್ವದ 10 ನಾಯಕರ ಜೊತೆ ದ್ವಿಪಕ್ಷಿಯ ಮಾತುಕತೆ. ಇದು ಇಂಡೋನೇಷ್ಯಾದ ಬಾಲಿಯಲ್ಲಿ 17ನೇ ಜಿ - 20 ಶೃಂಗಸಭೆ ನಡೆಯಲಿದೆ.* ನವೆಂಬರ್ 14 ರಂದು ದಿಲ್ಲಿಯಿಂದ ಇಂಡೋನೇಷ್ಯಾದ ಬಾಲಿಗೆ ತೆರಳಲಿರುವ ಪ್ರಧಾನಿ, ನವೆಂಬರ್ 17 ರಂದು ಮರಳಲಿದ್ದಾರೆ. * ಈ ನಡುವಿನ 48 ಗಂಟೆ ಅವಧಿಯಲ್ಲಿ ಜಿ - 20 ಶೃಂಗಸಭೆಯಲ್ಲಿ ಪೂರ್ಣ ಬ್ಯೂಸಿ ಶೆಡ್ಯೂಲ್‌ ರೂಪಿಸಿಕೊಂಡಿದ್ದು, ವಿಶ್ವದ ಪ್ರಮುಖ ನಾಯಕರ ಜತೆಗೆ ಮಹತ್ವದ ಮಾತುಕತೆ ನಡೆಸಲಿರುವುದು ವಿಶೇಷವಾಗಿದೆ.* ಜಾಗತಿಕವಾಗಿ ಕುಸಿದಿರುವ ಆರ್ಥಿಕತೆ ಪರಿಣಾಮದಿಂದ ಶೀಘ್ರ ಚೇತರಿಸಿಕೊಂಡು ಬಲಶಾಲಿಯಾಗಿ ಮುನ್ನಡೆಯುವ, ಅಂದರೆ 'ಒಟ್ಟಿಗೆ ಚೇತರಿಸಿಕೊಳ್ಳಿ, ಒಟ್ಟಿಗೆ ಮುನ್ನೆಡೆಯಿರಿ' ಎಂಬ ಥೀಮ್‌ನೊಂದಿಗೆ ಬಾಲಿ ಶೃಂಗ ಸಭೆ ಆರಂಭವಾಗಲಿದೆ. ಜಾಗತಿಕ ಹಸಿವು, ಆಹಾರ ಭದ್ರತೆ, ಇಂಧನ, ರಕ್ಷಣಾ ಮತ್ತು ಆರ್ಥಿಕತೆಯನ್ನು ಪೂರ್ಣ ಪ್ರಮಾಣದಲ್ಲಿ ಡಿಜಿಟಲ್‌ ವ್ಯವಸ್ಥೆ ಅಡಿಯಲ್ಲಿ ತರುವ ಬಗ್ಗೆ ಜಿ - 20 ನಾಯಕರು ಸುದೀರ್ಘ ಸಮಾಲೋಚನೆ ನಡೆಸಿ, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಇದೇ ವೇಳೆ ಉಕ್ರೇನ್‌ - ರಷ್ಯಾ ನಡುವೆ ಮುಂದುವರಿದಿರುವ ಯುದ್ಧದ ಬಗ್ಗೆ ನಾಯಕರು ಒಂದೇ ನಿಲುವು ತೆಗೆದುಕೊಳ್ಳುವ ಕುರಿತಂತೆಯೂ ಸಮಾಲೋಚನೆ ನಡೆಸಲಿದ್ದಾರೆ.* ರಷ್ಯಾ - ಉಕ್ರೇನ್‌ ಯುದ್ಧ ಆದಷ್ಟು ಬೇಗ ಕೊನೆಗಾಣಬೇಕು ಎಂದು ಈಗಾಗಲೇ ಪ್ರತಿಪಾದಿಸಿರುವ ಭಾರತ, ಇದೇ ಮಾತಿಗೆ ಕಟಿಬದ್ಧವಾಗಿ ನಿಲ್ಲಲಿದೆ ಎಂಬ ಮಾತನ್ನು ಮೋದಿ ಅವರು ಶೃಂಗಸಭೆಯಲ್ಲಿ ಪುನರುಚ್ಛಾರ ಮಾಡುವ ಸಾಧ್ಯತೆ ಇದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಭೆಗೆ ಗೈರು ಹಾಜರಾಗುತ್ತಿರುವುದು ಗಮನಾರ್ಹ.* ಶೃಂಗಸಭೆ ವೇಳೆ ಪ್ರಧಾನಿ ಮೋದಿ ಹಾಗೂ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾದ ಬಳಿಕ ಉಭಯ ನಾಯಕರ ನಡುವೆ ಮೊದಲ ಭೇಟಿ ಇದಾಗಿದ್ದು, ಭಾರತ - ಬ್ರಿಟನ್‌ ನಡುವಿನ ಹಲವು ದ್ವಿಪಕ್ಷಿಯ ಮಾತುಕತೆಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. * ವ್ಯಾಪಾರ - ವ್ಯವಹಾರ, ಭದ್ರತೆ, ಸಾಂಸ್ಕೃತಿಕ ವಿನಿಮಯ, ರಕ್ಷಣಾ ಸಹಕಾರ ಸೇರಿ ಹಲವು ಮಹತ್ವದ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ. ಮುಂದಿನ ಅವಧಿಗೆ ಜಿ - 20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಭಾರತಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಸಾಂಕೇತಿಕವಾಗಿ ಅಧ್ಯಕ್ಷತೆಯನ್ನು ಪ್ರಧಾನಿಗೆ ಹಸ್ತಾಂತರಿಸಲಿದ್ದಾರೆ. * ಡಿಸೆಂಬರ್ 1 ರಿಂದ ಅಧಿಕೃತವಾಗಿ ಅಧ್ಯಕ್ಷಿಯ ಕಾರ್ಯಭಾರ ಹೊರಲಿರುವ ಭಾರತ, ಮುಂದಿನ ಒಂದು ವರ್ಷ ಜಿ - 20 ಶೃಂಗಸಭೆಯ ಆತಿಥ್ಯ ವಹಿಸಿಕೊಳ್ಳಲಿದೆ. ಭಾರತದಲ್ಲಿ ನಡೆಯುವ ಜಿ - 20 ಸಭೆಗೆ ಈಗಾಗಲೇ ಸರಕಾರ ಸಿದ್ಧತೆ ನಡೆಸಿದೆ.* ಒಂದು ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ 200 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಸಾಂಸ್ಕತಿಕ, ರಾಜಕೀಯ, ದ್ವಿಪಕ್ಷಿಯ ಮಾತುಕತೆ ಸೇರಿ ಹಲವು ಸಮಾವೇಶಗಳು ನಡೆಯಲಿವೆ. ಈಗಾಗಲೇ ಸರಕಾರ ಥೀಮ್‌ ಹಾಗೂ ಲೋಗೊ ಅನಾವರಣಗೊಳಿಸಿದೆ. 2023ರ ಸೆಪ್ಟೆಂಬರ್‌ನಲ್ಲಿ ದಿಲ್ಲಿಯಲ್ಲಿ ಶೃಂಗಸಭೆ ನಡೆಯಲಿದೆ.* ಜಿ-20 ಶೃಂಗಸಭೆಯ ಲೋಗೊದಲ್ಲಿ ಕಮಲ ಚಿಹ್ನೆಗೆ ಅಪಸ್ವರ ಎತ್ತಿರುವ ಕಾಂಗ್ರೆಸ್‌ ವಿರುದ್ಧ ಭಾನುವಾರ ಕಿಡಿಕಾರಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, 'ಕಮಲದ ಹೂವು ಕೇವಲ ಬಿಜೆಪಿ ಪಕ್ಷದ ಚಿಹ್ನೆಯಲ್ಲ. 1950ರಲ್ಲೇ ರಾಷ್ಟ್ರೀಯ ಹೂವು ಎಂದು ಘೋಷಣೆ ಮಾಡಲಾಗಿದೆ.