Job Description: * 2022 ರ ನವೆಂಬರ್ 14 ರಂದು ಐಐಟಿ ಗುವಾಹಟಿಯಲ್ಲಿ ಪರಿಸರಕ್ಕಾಗಿ ಜೀವನಶೈಲಿ (ಲೈಫ್) ಮಿಷನ್ ಅಡಿಯಲ್ಲಿ "ಅಗ್ನಿ ತತ್ತ್ವ" ಅಭಿಯಾನದ ಭಾಗವಾಗಿ ಭಾರತ ವಿದ್ಯುತ್‌ ಪ್ರತಿಷ್ಠಾನ ಮತ್ತು ವಿಜ್ಞಾನ ಭಾರತಿಯಿಂದ "ಇಂಧನದ ಸುಸ್ಥಿರ ಬಳಕೆ" ಕುರಿತು ಒಂದು ದಿನದ ಸಮ್ಮೇಳನವನ್ನು ಆಯೋಜಿಸಲಾಗಿತ್ತು. * ಲೇಹ್ ಮತ್ತು ಭೋಪಾಲ್‌ನಲ್ಲಿ ನಡೆದ ಹಿಂದಿನ ಸಮ್ಮೇಳನಗಳ ನಂತರ ಇದು ಮೂರನೇ ಸಮ್ಮೇಳನವಾಗಿದೆ.* ಸಮ್ಮೇಳನದ ಮುಖ್ಯ ಅತಿಥಿಯಾಗಿದ್ದ ಅಸ್ಸಾಂ ರಾಜ್ಯಪಾಲ ಪ್ರೊ.ಜಗದೀಶ್ ಮುಖಿ ಸಮ್ಮೇಳನವನ್ನು ಉದ್ಘಾಟಿಸಿದರು. ಪವರ್ * ಫೌಂಡೇಶನ್ ಆಫ್ ಇಂಡಿಯಾ (ಪಿಎಫ್‌ಐ) ಮಹಾನಿರ್ದೇಶಕ ಮತ್ತು ವಿದ್ಯುತ್ ಸಚಿವಾಲಯದ ಮಾಜಿ-ಕಾರ್ಯದರ್ಶಿ ಶ್ರೀ ಸಂಜೀವ್ ಎನ್ ಸಹಾಯ್, ವಿದ್ಯುತ್ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಜಯ್ ತಿವಾರಿ, ಐಐಟಿ ಗುವಾಹಟಿಯ ಮಹಾನಿರ್ದೇಶಕ ಪ್ರೊಫೆಸರ್ ಡಾ ಟಿ ಜಿ ಸೀತಾರಾಮ್ ಮತ್ತು ರಾಷ್ಟ್ರೀಯ ಇಂಧನ ತರಬೇತಿ ಸಂಸ್ಥೆಯ ಮಹಾನಿರ್ದೇಶಕಿ ಡಾ ತೃಪ್ತ ಠಾಕೂರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. * ಸಮ್ಮೇಳನದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಇಂಧನ ತಜ್ಞರು, ಸಂಶೋಧಕರು, ಸರ್ಕಾರೇತರ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು. * ಕಡಿಮೆ ಮತ್ತು ಪರಿಣಾಮಕಾರಿ ಇಂಧನ ಬಳಕೆಯು ಸುಸ್ಥಿರ ಅಭಿವೃದ್ಧಿಗೆ ಹೇಗೆ ಕಾರಣವಾಗಬಹುದು ಎಂಬುದನ್ನು ಸಮ್ಮೇಳನವು ಪ್ರಮುಖವಾಗಿ ಚರ್ಚಿಸಲಾಯಿತು.