Job Description: * ಮುಕೇಶ್ ಅಂಬಾನಿಯವರ ಕಂಪನಿಯ ರಿಲಯನ್ಸ್ ಜಿಯೋವು ಭಾರತದ ದೂರಸಂಪರ್ಕ ವಲಯದ ಪ್ರಬಲ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. * ಟ್ರಸ್ಟ್ ರಿಸರ್ಚ್ ಅಡ್ವೈಸರಿ (ಟಿಆರ್ ಎ) ಕಂಪನಿಯು 2022 ರಲ್ಲಿ ಹೆಚ್ಚು ಜನ ಬಯಸುವ ಬ್ರ್ಯಾಂಡ್ ಗಳ ಕುರಿತು ವರದಿ ಬಿಡುಗಡೆ ಮಾಡಿದೆ. * ದೂರಸಂಪರ್ಕ ವಿಭಾಗದಲ್ಲಿ ಜಿಯೋ ಮೊದಲು ಸ್ಥಾನದಲ್ಲಿ ಇದೆ.* ಭಾರ್ತಿ ಏರ್ಟೆಲ್ ,ವೊಡಾಫೋನ್ ಐಡಿಯಾ ಮತ್ತು ಬಿಎಸ್ ಎನ್ ಎಲ್ ನಂತರದ ಸ್ಥಾನ ಪಡೆದುಕೊಂಡಿದೆ. * ಉಡುಪುಗಳ ವಿಭಾಗಳ ಅತಿ ಹೆಚ್ಚು ಇಷ್ಟಪಡುವ ಬ್ರ್ಯಾಂಡ್ ಗಳ ಪೈಕಿ ಅಡಿದಾಸ್ ಗೆ ಮೊದಲ ಸ್ಥಾನ, ನೈಕ್, ರೇಮಂಡ್, ಅಲೆನ್ ಸೋಲಿ ಮತ್ತು ಪೀಟರ್ ಇಂಗ್ಲೆಂಡ್ ನಂತರದ ಸ್ಥಾನದಲ್ಲಿವೆ. * ವಾಹನ ವಿಭಾಗದಲ್ಲಿ ಬಿಎಂ ಡಬ್ಲ್ಯೂ ಗೆ ಮೊದಲ ಸ್ಥಾನ ದೊರೆಕಿದೆ. ಟೊಯೋಟಾ, ಹುಂಡೈ ಮತ್ತು ಹೋಂಡಾ ಕ್ರಮವಾಗಿ ಎರಡು, ಮೂರೂ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿವೆ. * ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ ಎಲ್ ಐಸಿ ಮೊದಲ ಸ್ಥಾನದಲ್ಲಿದೆ. ಎಸ್ ಬಿಐ ಮತ್ತು ಐಸಿಐಸಿಐ ಬ್ಯಾಂಕ್ ನಂತರದ ಸ್ಥಾನದಲ್ಲಿವೆ.* ಇಂಧನ ವಿಭಾಗದಲ್ಲಿ ಎಚ್ ಪಿಸಿಎಲ್ ಮೊದಲ ಸ್ಥಾನದಲ್ಲಿದೆ, ಇಂಡಿಯನ್ ಆಯಿಲ್ ಮತ್ತು ಅದಾನಿ ಕ್ರಮವಾಗಿ ಎರಡು ಮತ್ತು ಮೂರೂ ಸ್ಥಾನದಲ್ಲಿವೆ.* ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಅಮುಲ್ ಮತ್ತು ನೆಸ್ ಕೆಫೆ, ಎಫ್ ಎಂಸಿಜಿ ವಿಭಾಗದಲ್ಲಿ ಫಾಗ್ , ಲ್ಯಾಕ್ಮೆ,, ನೀವಿಯ ಮತ್ತು ಕೋಲ್ಗೆಟ್ ಸ್ಥಾನ ಪಡೆದುಕೊಂಡಿವೆ. * ಇಂಟರ್ನೆಟ್ ವಿಭಾಗದಲ್ಲಿ ಅಮೆಜಾನ್ ಬ್ರ್ಯಾಂಡ್ ಮೊದಲ ಸ್ಥಾನದಲ್ಲಿದೆ. ಫೇಸಬುಕ್, ಫ್ಲಿಪ್ ಕಾರ್ಟ್ ಮತ್ತು ಗೂಗಲ್ ನಂತರದ ಸ್ಥಾನದಲ್ಲಿವೆ.