Job Description: * ಭಾರತೀಯ ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರಿಗೆ ಗಾಂಧಿ ಪೀಸ್ ಪಿಲಿಗ್ರಿಮ್ ಪ್ರಶಸ್ತಿಯನ್ನು ಖ್ಯಾತ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸೆಂಟರ್ ಫಾರ್ ನಾನ್ ವೈಯೋಲೆಂಟ್ ಚೇಂಜ್‌ನಲ್ಲಿ ಪ್ರದಾನ ಮಾಡಲಾಯಿತು.* ಗುರುದೇವರ ಭಾವಚಿತ್ರವನ್ನು, ಅಮೆರಿಕದ ನಾಗರಿಕ ಹಕ್ಕುಗಳ ಚಳುವಳಿಯ ಕೇಂದ್ರವಾದ, ಮೂರ್ ಹೌಸ್ ಕಾಲೇಜಿನಲ್ಲಿರುವ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಛಾಪೆಲ್ ಹಾಲ್ ಫೇಮ್‌ನಲ್ಲಿ ಫೇಮ್ ಹಾಕಲಾಯಿತು. * ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸೆಂಟರ್ ಫಾರ್ ನಾನ್ ವೈಯೊಲೆಂಟ್ ಚೇಂಜ್‌ನ ಗಾಂಧಿ ಪ್ರತಿಷ್ಠಾನವು, ಜಾಗತಿಕ ಮಾನವತಾವಾದಿಯಾದ, ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಶಾಂತಿ ಹಾಗೂ ಅಹಿಂಸೆಗಾಗಿ ಹೊಂದಿರುವ ಬದ್ಧತೆಯನ್ನು ಗುರುತಿಸಿ, ಅವರಿಗೆ 'ಗಾಂಧಿ ಪೀಸ್ ಪಿಲಿಗ್ರಿಮ್' ಪ್ರಶಸ್ತಿಯನ್ನು ಪ್ರದಾನ ಮಾಡಿತು. * ಎಂಎಲ್‌ಕೆ ಕೇಂದ್ರದ ಸೀನಿಯರ್ ಫೆಲೋ ಹಾಗೂ ಡಾ. ಮಾರ್ಟಿನ್ ಲೂಥರ್ ಕಿಂಗ್ ರವರ ಸೋದರಳಿಯರಾದ ಡಾ ಐಸಾಕ್ ನ್ಯೂಟನ್ ಫಾರಿಸ್ ಮತ್ತು ಭಾರತದ ಕಾನ್ಸುಲೇಟ್ ಜೆನರಲ್ ಶ್ರೀಮತಿ ಸ್ವಾತಿ ಕುಲ್ಕಕರ್ಣಿಯವರು ಸ್ವಾಗಿತಿಸಿದರು. * ಗುರುದೇವ್ ಶ್ರೀ ಶ್ರೀ ರವಿಶಂಕರರು 'ಐ ಸ್ಟಾಂಡ್ ಫಾರ್ ಪೀಸ್' ಎಂಬ ತಮ್ಮ ಜಾಗತಿಕ ಚಳುವಳಿಯನ್ನು ಯುನೈಟೆಡ್ ಸ್ಟೇಸ್ಟ್ಸ್‌ಗೆ ಹರಡಿದ್ದಾರೆ. * ಯೂರೋಪ್, ಕೇಂದ್ರ ಅಮೆರಿಕ ಹಾಗೂ ಯುನೈಟೆಡ್ ಸ್ಟೇಸ್ಟ್ಸ್ ನ ಅನೇಕ ಮಿಲಿಯನ್ ಜನರು ಈ ಚಳುವಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.