Job Description: * ಟಿವಿ ಚಾನೆಲ್‌ ಗಳು ರಾಷ್ಟ್ರೀಯ ಹಿತಾಸಕ್ತಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಪ್ರತಿದಿನ 30 ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತನ್ನ ಇತ್ತೀಚಿನ ಅಪ್‌ ಲಿಂಕಿಂಗ್ ಮತ್ತು ಡೌನ್‌ಲೋಡ್ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದೆ.* ಸುಮಾರು 11 ವರ್ಷಗಳ ನಂತರ ಭಾರತದಲ್ಲಿ ಟಿವಿ ಚಾನೆಲ್‌ಗಳ ಅಪ್‌ ಲಿಂಕಿಂಗ್, ಡೌನ್‌ಲಿಂಕ್ಗಾಗಿರುವ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬುಧವಾರ ಅನುಮೋದಿಸಿದ್ದು, ಹೊಸ ಮಾರ್ಗಸೂಚಿಗಳಲ್ಲಿ, ರಾಷ್ಟ್ರೀಯ ಹಿತಾಸಕ್ತಿ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಕ್ರಮಗಳ ಪ್ರಸಾರಕ್ಕಾಗಿ 30 ನಿಮಿಷಗಳ ಸಮಯವನ್ನು ನಿಗದಿಪಡಿಸಲಾಗಿದೆ.* ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳು ಶಿಕ್ಷಣ ಮತ್ತು ಸಾಕ್ಷರತೆಯ ಹರಡುವಿಕೆಯನ್ನು ಒಳಗೊಂಡಿವೆ ಎಂದು ಮಾರ್ಗಸೂಚಿಗಳು ಸೂಚಿಸಿವೆ. * ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳೆಯರ ಕಲ್ಯಾಣ, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಮತ್ತು ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಏಕೀಕರಣದ ರಕ್ಷಣೆ ಇವೆ ಮೊದಲಾದ ವಿಷಯಗಳನ್ನು ಪ್ರಸಾರ ಮಾಡಬೇಕಿದೆ. * ಸ್ಪೋರ್ಟ್ಸ್ ಚಾನೆಲ್‌ಗಳು ಮತ್ತು ಇತರ ವಿಷಯಗಳಂತಹ ವಾಹಿನಿಗಳು ತಮ್ಮ ವಿಷಯವನ್ನು ಸೂಕ್ತವಾಗಿ ಮಾರ್ಪಡಿಸಬಹುದು. * ರಾಷ್ಟ್ರೀಯ ಹಿತಾಸಕ್ತಿಯಲ್ಲಿ ವಿಷಯವನ್ನು ಪ್ರಸಾರ ಮಾಡಲು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಚಾನೆಲ್‌ಗಳಿಗೆ ಸಾಮಾನ್ಯ ಸಲಹೆಗಳನ್ನು ನೀಡಬಹುದು. ಅದನ್ನು ಚಾನಲ್ ಅನುಸರಿಸಬೇಕು ಎಂದು ಹೇಳಲಾಗಿದೆ.* ಟಿವಿ ಚಾನೆಲ್‌ಗಳನ್ನು ಅಪ್‌ಲಿಂಕ್ ಮಾಡಲು ಮತ್ತು ಡೌನ್‌ಲಿಂಕ್ ಮಾಡಲು, ಟೆಲಿಪೋರ್ಟ್‌ಗಳು/ಟೆಲಿಪೋರ್ಟ್ ಹಬ್‌ಗಳ ಸ್ಥಾಪನೆ, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (DSNG)/ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (SNG) / ಎಲೆಕ್ಟ್ರಾನಿಕ್ ನ್ಯೂಸ್ ಗ್ಯಾದರಿಂಗ್ (ENG) ಸಿಸ್ಟಂ , ಭಾರತೀಯ ಸುದ್ದಿ ಸಂಸ್ಥೆಗಳಿಂದ ಅಪ್‌ಲಿಂಕ್ ಮಾಡುವುದು ಮತ್ತು ಲೈವ್ ಈವೆಂಟ್‌ನ ತಾತ್ಕಾಲಿಕ ಅಪ್‌ಲಿಂಕ್ ಮಾಡುವ ಬಗ್ಗೆ ಭಾರತದಲ್ಲಿ ನೋಂದಾಯಿಸಲಾದ ಕಂಪನಿಗಳು/LLP ಗಳಿಗೆ ಅನುಮತಿಗಳ ಬಗ್ಗೆ ಸಮಸ್ಯೆಗಳನ್ನು ಸರಾಗಗೊಳಿಸುವ ಗುರಿಯನ್ನು ಏಕೀಕೃತ ಮಾರ್ಗಸೂಚಿಗಳು ಹೊಂದಿವೆ.* ಭಾರತೀಯ ಸುದ್ದಿ ಸಂಸ್ಥೆಗಳಿಂದ ಅಪ್‌ಲಿಂಕ್ ಮಾಡುವುದು ಮತ್ತು ಲೈವ್ ಈವೆಂಟ್‌ನ ತಾತ್ಕಾಲಿಕ ಅಪ್‌ಲಿಂಕ್ ಮಾಡುವುದು.11 ವರ್ಷಗಳ ಹಿಂದೆ 2011 ರಲ್ಲಿ ಅಂತಹ ಮಾರ್ಗಸೂಚಿಗಳನ್ನು ಕೊನೆಯ ಬಾರಿಗೆ ತಿದ್ದುಪಡಿ ಮಾಡಲಾಗಿದೆ.* ವ್ಯವಹಾರವನ್ನು ಸುಲಭಗೊಳಿಸುವ ವಿಷಯದಲ್ಲಿ ಸಚಿವಾಲಯವು ಅನೇಕ ಸುಧಾರಣೆಗಳನ್ನು ಮಾಡಿದೆ, ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ 30 ನಿಮಿಷಗಳ ಕಾಲಾವಕಾಶವನ್ನು ಹೊಸ ಮಾರ್ಗಸೂಚಿಯಲ್ಲಿ ನೀಡಲಾಗಿದೆ ಎಂದು ಅಪೂರ್ವ ಚಂದ್ರ ಹೇಳಿದ್ದಾರೆ. * ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗಾಗಿ, ಮಹಿಳಾ ಸಬಲೀಕರಣ, ಬೋಧನೆ ಮತ್ತು ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲಾಗುವುದು.* ಎಲ್ಲಾ ಚಾನೆಲ್‌ಗಳು ರಾಷ್ಟ್ರೀಯ ಹಿತಾಸಕ್ತಿಯಲ್ಲಿ 30 ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡುವುದು ಕಡ್ಡಾಯವಾಗಿದೆ. ಆದಾಗ್ಯೂ, ಕ್ರೀಡೆ, ವನ್ಯಜೀವಿ ಮತ್ತು ವಿದೇಶಿ ಚಾನೆಲ್‌ಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.