Job Description: * ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಸಿಜೆಐ ಹುದ್ದೆಯಿಂದ ಇಂದು (ನವೆಂಬರ್ 8) ರಂದು ನಿವೃತ್ತಿಯಾಗುತ್ತಿದ್ದಾರೆ, ವಕೀಲ ಮತ್ತು ನ್ಯಾಯಮೂರ್ತಿಯಾಗಿ 37 ವರ್ಷದ ಕಾನೂನು ಸೇವೆ ಖುಷಿ ನೀಡಿದೆ ಎಂದು ಹೇಳಿದರು. * 72 ದಿನದವರೆಗೆ ಮಾತ್ರ ದೇಶದ ಅತ್ಯುನ್ನತ ನ್ಯಾಯಿಕ ವ್ಯವಸ್ಥೆಯ ಮುಖ್ಯಸ್ಥರಾದ ಅವರಿಗೆ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಸೋಮವಾರ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. * ಲಲಿತ್ ರವರು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡುತ್ತಿದ್ದ ನಾನು, ಸರ್ವೋಚ್ಛ ನ್ಯಾಯಾಲಯದಲ್ಲಿ ವೃತ್ತಿ ಆರಂಭಿಸಿದಾಗ ಕೋರ್ಟ್ ನಂ 1 ರಲ್ಲಿ ಆಗಿನ ಸಿಜೆಐ ವೈ.ವಿ. ಚಂದ್ರಚೂಡರ ಮುಂದೆ ವಾದ ಮಂಡಿಸಿದೆ ಎಂದು ಹೇಳಿದರು.* ಈಗ ಅವರ ಪುತ್ರ ಮತ್ತು ನಿಯೋಜಿತ ಸಿಜೆಐ ಡಿ.ವೈ. ಚಂದ್ರಚೂಡ್ ಅವರಿಗೆ ಅಧಿಕಾರ ಹಸ್ತಾಂತರಿಸುತ್ತಿರುವುದು ಭಾವನಾತ್ಮಕ ಕ್ಷಣ ಎಂದರು. ಅಲ್ಪಕಾಲ ಈ ಹುದ್ದೆಯಲ್ಲಿದ್ದರೂ ಸ್ಮರಣೀಯವಾದ ಕಾರ್ಯ ಮಾಡಿದ ತೃಪ್ತಿ ಇದೆ, ಹಲವು ಸಾಂವಿಧಾನಿಕ ಪೀಠಗಳನ್ನು ರಚಿಸಿರುವೆ ಎಂದು ವೃತ್ತಿ ಅನುಭವ ಬಗ್ಗೆ ಹೇಳಿದರು.* ಸುಪ್ರೀಂಕೋರ್ಟ್‌ನಲ್ಲಿ ಎರಡು ಸಾಂವಿಧಾನಿಕ ಪೀಠಗಳು ಏಕಕಾಲಕ್ಕೆ ವಿಚಾರಣೆ ನಡೆಸಿದ್ದ ಇತಿಹಾಸ ಇರಲಿಲ್ಲ, ಈಗ ಒಂದೇ ದಿನ ಮೂರು ಸಾಂವಿಧಾನಿಕ ಪೀಠಗಳು ಕಲಾಪ ನಡೆಸಿವೆ. * ಲಲಿತ್ ಅವರನ್ನು ಅಭಿನಂದಿಸಿ ಜಸ್ಟೀಸ್ ಚಂದ್ರಚೂಡ್ ಮಾತನಾಡಿದರು, ಲಲಿತ್ ಅವರ ತಂದೆ, ನಿವೃತ್ತ ನ್ಯಾಯಮೂರ್ತಿ ಉಮೇಶ್ ರಂಗನಾಥ ಲಲಿತ್ ಹಾಗೂ ಕುಟುಂದ ಇನ್ನಿತರ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.