Job Description: * ಸ್ವತಂತ್ರ ಭಾರತದ ಮೊದಲ ಮತದಾರ ಎಂಬ ಗೌರವಕ್ಕೆ ಪಾತ್ರರಾಗಿದ್ದ 106 ವರ್ಷದ ಶ್ಯಾಮ್ ಶರಣ್ ನೇಗಿರವರು ತಮ್ಮ ಹುಟ್ಟೂರಾದ ಹಿಮಾಚಲ್ ಪ್ರದೇಶದ ಕಲ್ಪಾದಲ್ಲಿ ನವೆಂಬರ್ 5 ರಂದು ನಿಧನರಾದರು.* ಶ್ಯಾಮ್ ಶರಣ್ ರವರ ಕೊನೆಯ ಮತ - ರಾಜ್ಯ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ತಮ್ಮ ಕೊನೆಯ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. * ಸ್ವತಂತ್ರ ಭಾರತದಲ್ಲಿ 1951 ಅಕ್ಟೋಬರ್ 23 ರಂದು ಕಲ್ಪಾ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು ಹಾಗಾಗಿ ಇವರು ಭಾರತದ ಮೊದಲ ಮತದಾರರಾದರು.* 1917 ರಲ್ಲಿ ಜನಿಸಿದ್ದ ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. 1951 ರ ನಂತರ ನಡೆದ ಎಲ್ಲ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಚಲಾಯಿಸಿದರು.