Job Description: * 2022 ರ ಅಕ್ಟೋಬರ್ 2 ರಂದು ಇಪಿಎಫ್ಒ ನಲ್ಲಿ ಆರಂಭವಾದ ವಿಶೇಷ ಅಭಿಯಾನ 2.0 ಮತ್ತು ವಿಶೇಷ ಸ್ವಚ್ಛತಾ ಅಭಿಯಾನ 2.0 ಮಾಡಲಾಗಿದೆ, ವಿಶೇಷ ಎಸ್.ಸಿ.ಡಿ.ಪಿ.ಎಂ ನ ವಿಶೇಷ ಅಭಿಯಾನದಲ್ಲಿ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. * ಭೌತಿಕವಾಗಿ 5 ಲಕ್ಷಕ್ಕೂ ಹೆಚ್ಚು (5,05,501) ಕಡತಗಳ ಪೈಕಿ 4,14,470 ಕಡತಗಳನ್ನು ಪರಿಶೀಲಿಸಿದ್ದು, ತನ್ನ ಉದ್ದೇಶವನ್ನು ಕಳೆದುಕೊಂಡ 95788 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. * ಹೆಚ್ಚುವರಿಯಾಗಿ 2806 ಇ-ಕಡತಗಳನ್ನು ಪರಿಶೀಲಿಸಿ ಮುಕ್ತಾಯಗೊಳಿಸಲಾಗಿದೆ ಮತ್ತು 2,794 ದೈನಂದಿನ ವಿಷಯಗಳ ಕಡಗಳನ್ನು ತ್ವರಿತವಾಗಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ, ಇದೇ ಕಾಲಕ್ಕೆ ಕುಂದುಕೊರತೆ ವಿಭಾಗದಲ್ಲಿ ಇಪಿಎಫ್ಒ 2,408 ಕಡತಗಳ ನಿಗದಿತ ಗುರಿಯಲ್ಲಿ 2,390 ಕುಂದುಕೊರತೆ ಸಮಸ್ಯೆಗಳನ್ನು ನಿವಾರಿಸಲಾಗಿದೆ.* ಇಪಿಎಫ್ಒ ನಲ್ಲಿ ಸ್ವಚ್ಛತಾ ಅಭಿಯಾನ 2.0 ರಡಿ ನಗರ, ಅರೆ ನಗರ ಮತ್ತು ದೂರದ ಪ್ರದೇಶಗಳಲ್ಲಿ 16 ಅಭಿಯಾನ ಸ್ಥಳಗಳನ್ನು ಗುರುತಿಸಲಾಗಿತ್ತು, ಇಲ್ಲಿ ತನ್ನ ಭೌತಿಕ ಮೂಲ ಸೌಕರ್ಯ ಮತ್ತು ಕೆಲಸದ ವಾತಾವರಣದಲ್ಲಿ ಪ್ರಮುಖ ಬದಲಾವಣೆಗಳಾಗಿವೆ.* ಇಪಿಎಫ್ಒನ 726 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಗುರಿ ಹೊಂದಿದ್ದು, 945 ಸ್ಥಳಗಳಲ್ಲಿ ಅಭಿಯಾನ ಗುರಿ ಮೀರಿ ಸಾಧನೆ ಮಾಡಿದೆ, ಇದರಿಂದ ವಿಲೇವಾರಿ ಮಾಡಲಾದ ತ್ಯಾಜ್ಯ ಮತ್ತು ನಿರುಪಯುಕ್ತ ವಸ್ತುಗಳಿಂದ ಸುಮಾರು 19 ಲಕ್ಷ ರೂಪಾಯಿ ಆದಾಯ ಸಂಗ್ರಹವಾಗಿದೆ.* ಅಭಿಯಾನದ ಸಂದರ್ಭದಲ್ಲಿ ಇಪಿಎಫ್ಒ ಉತ್ತಮ ಅಭ್ಯಾಸದ ವಿಶೇಷ ಕ್ರಮಗಳನ್ನು ಅಳವಡಿಸಿಕೊಂಡಿದೆ. - ಚಂಡೀಗಢದ ಪ್ರಾದೇಶಿಕ ಕಚೇರಿ ಹಾಸಿಗೆ ಹಿಡಿದಿರುವ/ ಪಾರ್ಶ್ವವಾಯು ಸಮಸ್ಯೆಯಿಂದಾಗಿ ಮನೆಯಲ್ಲಿರುವವರಿಗೆ ಮುಖ ದೃಢೀಕರಣ ಅಪ್ಲೀಕೇಶನ್ ಮೂಲಕ ಜೀವನ ಪ್ರಮಾಣ ಪತ್ರಗಳನ್ನು ವಿತರಿಸುವ ಅಭಿಯಾನವನ್ನು ಕೈಗೊಂಡಿತ್ತು. - ಜೋಧ್ ಪುರ್ ಪ್ರಾದೇಶಿಕ ಕಚೇರಿ ಮತ್ತು ಗೋರಖ್ ಪುರ್ ಪ್ರಾದೇಶಿಕ ಕಚೇರಿಗಳಿಗೆ ನಿಯಮಿತವಾಗಿ ಭೇಟಿ ನೀಡುವ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ವೀಲ್ ಚೇರ್ ಸೌಲಭ್ಯ ಒದಗಿಸಲಾಗಿದೆ. - ರಾಜ್ ಕೋಟ್ ನ ಪ್ರಾದೇಶಿಕ ಕಚೇರಿ “ಜೀವನ್ ಪ್ರಮಾಣ್ ರಥ್” ಎಂಬ ವಿಶೇಷ ಕ್ರಮವನ್ನು ಆರಂಭಿಸಿದ್ದು, ವೃದ್ಧಾಶ್ರಮ/ದಿವ್ಯಾಂಗರ ಬಳಿಗೆ ತೆರಳಿ ಜೀವನ್ ಪ್ರಮಾಣ್ ಪತ್ರ [ಡಿಜಿಟಲ್ ಲೈಫ್ ಸರ್ಟಿಫಿಕೇಟ್] ಗಳನ್ನು ವಿತರಿಸಿತು.