Job Description: * ಭಾರತೀಯ ಉಕ್ಕು ಪ್ರಾಧಿಕಾರ ಲಿಮಿಟೆಡ್‌ (ಎಸ್‌ಎಐಎಲ್‌) ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಒಡಿಶಾ ರಾಜ್ಯದ ರೂರ್ಕೆಲಾದಿಂದ ವಾಣಿಜ್ಯ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ನವದೆಹಲಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಮತ್ತು ಎಂ) ಒಪ್ಪಂದಕ್ಕೆ ಸಹಿ ಹಾಕಿದವು.* 2018 ರಲ್ಲಿ ಎಸ್‌ಎಐಎಲ್‌, ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗಾಗಿ ಉಡಾನ್‌ ಯೋಜನೆಯಡಿ ತನ್ನದೇ ಆದ ವಿಮಾನ ನಿಲ್ದಾಣವನ್ನು ಬಳಸಲು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿತ್ತು.* ಇದು ರೂರ್ಕೆಲಾದಿಂದ ವಾಣಿಜ್ಯ ವಿಮಾನಗಳ ಪ್ರಾರಂಭಕ್ಕೆ ಅನುಕೂಲ ಮಾಡಿಕೊಡುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು ಈ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಆರ್ಥಿಕ ಬೆಂಬಲವನ್ನು ಒದಗಿಸಿದೆ.* 2023 ರ ಜನೇವರಿಯಲ್ಲಿ ರೂರ್ಕೆಲಾದಲ್ಲಿ ಒಟ್ಟು 44 ಪಂದ್ಯಗಳ ಪೈಕಿ 20 ಪಂದ್ಯಗಳು ನಡೆಯಲಿವೆ.* ಎಸ್‌ಎಐಎಲ್‌ ಮತ್ತು ‘ಮಹಾರತ್ನ’ ಸಿಪಿಎಸ್‌ಇ, ತನ್ನ ಉತ್ಪಾದನಾ ಸೌಲಭ್ಯಗಳ ಸುತ್ತಲಿನ ಬಾಹ್ಯ ಪ್ರದೇಶಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ.