Job Description: * 2022 ರ 67 ನೇ ಕರ್ನಾಟಕದ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ "ನನ್ನ ನಾಡು ನನ್ನ ಹಾಡು - ಕೋಟಿ ಕಂಠ ಗಾಯನ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. * ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಕೂಡ ಗಾಯನ ಹಮ್ಮಿಕೊಳ್ಳಲಾಗಿದೆ, 10,000 ಕ್ಕೂ ಹೆಚ್ಚು ಸ್ಥಳಗಳಲ್ಲಿ, ಗಡಿನಾಡುಗಳಲ್ಲಿ, ಹೊರರಾಜ್ಯದಲ್ಲಿ, ಹೊರದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಕಂಠಗಳಲ್ಲಿ ಕನ್ನಡ ಗಾಯನ ಮೊಳಗಳಿವೆ. * ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಾವಿರಾರು ಜನರು ಗೀತ ಗಾಯನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ, 41 ದೇಶಗಳು, 27 ರಾಜ್ಯಗಳು, 18,800 ಸಂಘ-ಸಂಸ್ಥೆಗಳು, 10 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಕನ್ನಡದ ಹಾಡುಗಳು ಮೊಳಗಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಿಳಿಸಿದೆ.* ಬೆಂಗಳೂರಿನ ವಿಧಾನಸೌಧ ಮೆಟ್ಟಿಲು, ಎಲ್ಲ ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು, ಆಟೊ ತಂಗುದಾಣಗಳು, ಕಾರಾಗೃಹ, ಐಟಿಬಿಟಿ ಸಂಸ್ಥೆಗಳು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಲಾಲ್ಬಾಗ್ಗಳಲ್ಲಿ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.* ಮೈಸೂರು ಅರಮನೆ, ಚಿತ್ರದುರ್ಗದ ಕೋಟೆ, ಮಂಗಳೂರು ಕಡಲತೀರ, ತುಮಕೂರು ಸಿದ್ದಗಂಗಾ ಮಠ, ಪ್ರವಾಸಿ ತಾಣಗಳಾದ ಶೃಂಗೇರಿ, ಹಂಪಿ, ಬೇಲೂರು, ಪಾವಗಡದ ಸೌರಶಕ್ತಿ ಘಟಕ, ರಾಯಚೂರು ಉಷ್ಣವಿದ್ಯುತ್ ಸ್ಥಾವರ, ಮಣಿಪಾಲದ ಕೆಎಂಸಿ, ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಹಲವೆಡೆ ಕಾರ್ಯಕ್ರಮ ನಡೆಯಲಿದೆ.