Job Description: * ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 2022 ರ ಅಕ್ಟೋಬರ್ 27 ಮತ್ತು 28 ರಂದು ಹರಿಯಾಣದ ಸೂರಜ್ ಕುಂಡ್ ನಲ್ಲಿ ನಡೆಯಲಿರುವ ರಾಜ್ಯಗಳ 'ಗೃಹ ಸಚಿವರ ಚಿಂತನ ಶಿಬಿರ'ದ ಅಧ್ಯಕ್ಷತೆ ವಹಿಸಲಿದ್ದಾರೆ. * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಅಕ್ಟೋಬರ್ 28 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಿಂತನ ಶಿಬಿರವನ್ನುದ್ದೇಶಿಸಿ ಮಾತನಾಡಲಿದ್ದಾರೆ.* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ' 2047 ಮುನ್ನೋಟ' ಮತ್ತು ಪಂಚ ಪ್ರಾಣದ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು ಚಿಂತನ ಶಿಬಿರದ ಉದ್ದೇಶವಾಗಿದೆ.* ಸೈಬರ್ ಅಪರಾಧ ನಿರ್ವಹಣೆಗಾಗಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು, ಪೊಲೀಸ್ ಪಡೆಗಳ ಆಧುನೀಕರಣ, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಐಟಿಯ ಬಳಕೆಯ ವರ್ಧನೆ, ಭೂ ಗಡಿ ನಿರ್ವಹಣೆ ಮತ್ತು ಕರಾವಳಿ ಭದ್ರತೆ ಹಾಗೂ ಇತರ ಆಂತರಿಕ ಭದ್ರತೆಯಂತಹ ವಿಷಯಗಳ ಬಗ್ಗೆ ಚರ್ಚಿಸಲಿರುವ ಸಮ್ಮೇಳನ.* '2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ'ದ ಗುರಿಯನ್ನು ಸಾಧಿಸಲು 'ನಾರಿ ಶಕ್ತಿ'ಯ ಪಾತ್ರ ಮಹತ್ವದ್ದಾಗಿದ್ದು, ಮಹಿಳೆಯರ ಸುರಕ್ಷತೆಗೆ ಮತ್ತು ಅವರಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ವಿಶೇಷ ಒತ್ತು ನೀಡಲಾಗುವುದು.* ರಾಷ್ಟ್ರೀಯ ನೀತಿ ನಿರೂಪಣೆ ಮತ್ತು ಉತ್ತಮ ಯೋಜನೆ ಮತ್ತು ಸಮನ್ವಯವನ್ನು ಸುಗಮಗೊಳಿಸುವುದು ಸಹ ಸಮ್ಮೇಳನದ ಉದ್ದೇಶವಾಗಿದೆ, ಸಮ್ಮೇಳನದ ಮೊದಲ ದಿನ, ಗೃಹರಕ್ಷಕ ದಳ, ಪೌರ ರಕ್ಷಣೆ, ಅಗ್ನಿಶಾಮಕ, ಶತ್ರು ಆಸ್ತಿ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.