Job Description: * ಭಾರತೀಯ ವಾಯುಪಡೆ(ಐಎಎಫ್) ಇತ್ತೀಚೆಗೆ ಭಾಷೀದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳನ್ನು (ಎಲ್‌ಸಿಎಚ್‌) ಸೇವೆಗೆ ಸೇರ್ಪಡೆ ಗೊಳಿಸಿತು, ಇದು ದೇಶೀಯವಾಗಿ ನಿರ್ಮಾಣಗೊಳಿಸಿ, ವಾಯುಸೇನೆಗೆ ಸೇರ್ಪಡೆಗೊಂಡ ಎರ್ ಕ್ರಾಪ್ಟ್ ಗಳ ಪ್ರಥಮ ಸ್ಟ್ಯಾಡ್ರನ್ ಆಗಿದೆ. * ಮಾರ್ಚ್ 2021 ರಲ್ಲಿ ಭಾರತ ಸರ್ಕಾರ 3,887 ಕೋಟಿ ರುಪಾಯಿಗಳ ಮೊತ್ತದಲ್ಲಿ 15 ಪ್ರಚಂಡ ಎಲ್‌.ಎಚ್ ಗಳ ಉತ್ಪಾದನೆಗೆ ಅನುಮೋದನೆ ನೀಡಿತು, ಭಾರತ ಸರ್ಕಾರ ಉತ್ಪಾದನಾ ಹಾದಿಯಲ್ಲಿ ಹೆಚ್ಚಿನ 377 ಕೋಟಿ ರೂಪಾಯಿಗಳ ವೆಚ್ಚಕ್ಕೂ ಅನುಮತಿ ನೀಡಿತು.* ಪ್ರಚಂಡ ಎಲ್‌ಸಿಎಚ್ ಉತ್ಪಾದಕ ಎಚ್‌ಎಎಲ್‌ಗೆ ಭಾರತೀಯ ವಾಯುಪಡೆಗೆ ಇನ್ನೂ 65 ಹೆಲಿಕಾಪ್ಟರ್‌ಗಳು ಹಾಗೂ ಭಾರತೀಯ ಭೂಸೇನೆಗೆ 97 ಹೆಲಿಕಾಪ್ಟರ್‌ಗಳನ್ನು ಪೂರೈಸುವಂತೆ ಆದೇಶ ನೀಡಲಾಯಿತು.* ಐದು ಕಿಲೋಮೀಟರ್‌ಗಿಂತಲೂ, ಹೆಚ್ಚು ಎತ್ತರದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ, ಹೆಚ್ಚಿನ ಪ್ರಮಾಣದ ಆಯುಧಗಳು ಹಾಗೂ ಇಂಧನದ ಭಾರವನ್ನು ಹೊತ್ತು ಮೇಲಕ್ಕೇರುವ ಜಗತ್ತಿನ ಏಕೈಕ ಯುದ್ಧ ಹೆಲಿಕಾಪ್ಟರ್ ಆಗಿದೆ, ಎಲ್‌ಸಿಎಚ್‌ ಸಿಯಾಚಿನ್‌ ನೀರ್ಗಲ್ಲು ಪ್ರದೇಶ ಹಾಗೂ ಕಾರ್ಗಿಲ್‌ನಂತಹ ದುರ್ಗಮ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಭಾರತೀಯ ಸೇನಾಪಡೆಗಳ ಅಗತ್ಯಗಳನ್ನು ಪೂರೈಸಲು ಸಮರ್ಥ ವಾಗಿದೆ.* ಎಲ್‌ಓ ವಿನ್ಯಾಸ ಹೊಂದಿರುವ ಹೆಲಿಕಾಪ್ಟ‌ರ್ ಆಗಿದ್ದು, ಇದು ಅತ್ಯಂತ ಕಡಿಮೆ ಇನ್‌ಫ್ರಾರೆಡ್ (ಐಆರ್) ಸಿಗ್ನಚ‌ ಹೊಂದಿದೆ, ಐಆರ್ ತಡೆಗಟ್ಟುವ (ಸಪ್ರೆಸರ್) ವ್ಯವಸ್ಥೆಯನ್ನೂ ಹೊಂದಿದೆ, ಹೆಲಿಕಾಪ್ಟರ್ ಕನಿಷ್ಠ ರೇಡಾರ್, ದೃಶ್ಯ ಮತ್ತು ಶ್ರವಣ ಸಿಚರ್ ಇದೆ ಕೇವಲ 5.8 ಟನ್ ತೂಕ ಹೊಂದಿರುವ ಈ ಹೆಲಿಕಾಪ್ಟರ್, ಲೋವರ್‌ ರೇಡಾರ್‌ ಕ್ರಾಸ್‌ ಸೆಕ್ಷನ್‌ (ಆರ್‌ಸಿಎಸ್) ಗೋಸ್ಕರ ಕ್ಯಾಂಟೆಡ್ ಪ್ಯಾನಲ್‌ಗಳನ್ನೂ ಹೊಂದಿದೆ.* ಶತ್ರುಗಳಿಗೆ ಪತ್ತೆಯಾಗುವುದನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯದ ಜೊತೆಗೆ, ಈ ಹೆಲಿಕಾಪ್ಟರ್ ಗಂಟೆಗೆ 275 ಕಿಲೋಮೀಟರ್ (148 ನಾಟ್ಸ್) ವೇಗದಲ್ಲಿ ಚಲಿಸುತ್ತದೆ. ಇದರ ಕಾದಾಟ ವ್ಯಾಪ್ತಿ 500 ಕಿಲೋಮೀಟರ್‌ಗಳಷ್ಟು ಬೃಹತ್ತಾಗಿದೆ, 5,490 ಮೀಟರ್ ಮೇಲಕ್ಕೆ ಏರುವ ಸಾಮರ್ಥ್ಯ ಹೊಂದಿರುವ ಪ್ರಚಂಡ್ ಹೆಲಿಕಾಪ್ಟರ್ ಅತ್ಯಂತ ಎತ್ತರದ ಪ್ರದೇಶಗಳ ಕಾದಾಟದಲ್ಲೂ ಪಾಲ್ಗೊಳ್ಳಬಲ್ಲದು.* ಎಲ್‌ಸಿಎಚ್‌ ಹೆಲಿಕಾಪ್ಟರ್‌ಗಳ ಸ್ವಬ್ ರಸ್ತೆಗಳು ಅಥವಾ ಆರ್ಮಾ ಮೆ೦ಟ್ ಬೂಮ್‌ಗಳ ಪ್ರತಿ ಬದಿಯಲ್ಲೂ ಆಯುಧ ಜೋಡಿಸಬಲ್ಲ ವ್ಯವಸ್ಥೆ ಇದೆ, ಪ್ರತಿಯೊಂದು ಆಯುಧ ಜೋಡಣೆಯ ಸ್ಟೇಷನ್ ಸಹ ಆಯಂಟಿ ಟ್ಯಾಂಕ್ ಗೈಡೆಡ್ ಕ್ಷಿಪಣಿಗಳು (ಎಟಿಜಿಎಂ) ಅಥವಾ ರಾಕೆಟ್‌ಗಳು, ಅಥವಾ ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳನ್ನು (ಎಎಎಂ) ಕೊಂಡೊಯ್ಯಬಲ್ಲದು, ಅದಕ್ಕೂ ಹೆಚ್ಚಾಗಿ, ಈ ಹೆಲಿಕಾಪ್ಟರ್ ಬದಿಗಳಲ್ಲಿ ಜೋಡಿಸಲಾದ ಆಯುಧ ಅಳವಡಿಕಾ ವ್ಯವಸ್ಥೆಯಿದೆ.* ಹೆಚ್ಚಿನ ಸುರಕ್ಷತೆಗಾಗಿ ಕ್ಯಾಷ್ ಲ್ಯಾಂಡಿಂಗ್ ನಂತಹಾ ಸಂದರ್ಭದಲ್ಲೂ ಪ್ರಾಣಾಪಾಯ ಕಡಿಮೆ ಮಾಡುವಂತಹ ಕ್ಯಾಚ್ ವರ್ದಿ ಲ್ಯಾಂಡಿಂಗ್ ಗೇರ್ ಗಳನ್ನು ಇದು ಹೊಂದಿದೆ.* ಎಲ್‌ಸಿಎಚ್ ಅಸಾಧಾರಣ ಸೆನ್ಸರ್ ವ್ಯವಸ್ಥೆಗಳನ್ನು ವ್ಯಾಪ್ತಿ ಇದೆ, ಇದರಲ್ಲಿ ಸಿಸಿಡಿ ಕ್ಯಾಮರಾ ಹೊಂದಿರುವ ಇಲೆಕ್ಟೋ ಆಪ್ಟಿಕಲ್ ಪಾಡ್, ಫಾರ್ವರ್ಡ್ ಲುಕಿಂಗ್ ಇನ್‌ಫ್ರಾರೆಡ್ (ಎಫ್‌ಎಲ್‌ಐಆರ್) ಹಾಗೂ ಲೇಸರ್ ರೇಂಜ್ ಫೈಂಡರ್ (ಎಲ್‌ಆರ್‌ಎಫ್) ಸೆನ್ಸರ್‌ಗಳೂ ಇವೆ. * 2019 ರ ಆರಂಭದಲ್ಲಿ, ಒಡಿಶಾದ ಚಂಡಿಪುರ ಇಂಟಿಗೇಟೆಡ್ ಟೆಸ್ಟ್ ರೇಂಜ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಚಂಡ್ ಹೆಲಿಕಾಪ್ಟರ್ ಎಎಎಂ ಬಳಸಿ, ಗಾಳಿಯಲ್ಲಿ ಚಲಿಸುತ್ತಿದ್ದ ಗುರಿಯ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿತ್ತು, ಗಾಳಿಯಿಂದ ಗಾಳಿಗೆ ನಡೆಸುವ ದಾಳಿ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಪೆಲಿಕಾಪ್ಟರ್ ಮೂಲಕ ನಡೆಸಲಾಯಿತು, ಭಾರತದ ರಕ್ಷಣಾ ಪಡೆಗಳು ಉಪಯೋಗಿಸುವ ಇನ್ನಾವುದೇ ಮತ್ತು ಉತ್ಪಾದನೆಯಲ್ಲೂ ಬಳಸಿಕೊಂಡಿದೆ.