Job Description: * ಬಾಲಾಸೋರ್ ನ ಒಡಿಶಾ ಕರಾವಳಿಯ ರಕ್ಷಣಾ ಕೇಂದ್ರದಿಂದ ಹೊಸ ಪೀಳಿಗೆಯ ಪರಮಾಣು ಸಾಮರ್ಥ್ಯದ ಖಂಡಾಂತರ ಅಗ್ನಿಪ್ರೆಮ್ ಕ್ಷಿಪಣಿಯನ್ನು ಅಕ್ಟೋಬರ್ 21 ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. * ಈ ಕ್ಷಿಪಣಿಯನ್ನು ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ, ಅಕ್ಟೋಬರ್ 21 ರಂದು ಬೆಳಿಗ್ಗೆ 9.45 ಕ್ಕೆ ಉಡಾಯಿಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಿಳಿಸಿದೆ. * ಕ್ಷಿಪಣಿಯ ಚಲನೆಯನ್ನು ಕವರ್ ಮಾಡಲು ಟರ್ಮಿನಲ್ ಪಾಯಿಂಟ್ ನಲ್ಲಿ ಎರಡು ದೌನ್ ರೇಂಜ್ ಹಡಗುಗಳು, ಕರಾವಳಿ ಉದ್ದಕ್ಕೂ ರಾಡಾರ್, ಟೆರಿಮೆಟ್ರಿ ಮತ್ತು ಎಲೆಕ್ಟ್ರಿಕ್ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಗಳನ್ನೂ ಅಳವಡಿಸಲಾಗಿತ್ತು.* ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ -ಪಿ ಕ್ಷಿಪಣಿಯನ್ನು ಡಿಆರ್ ಡಿಓ ಜೂನ್ 28, 2022 ರಂದು ಯಶಸ್ವಿಯಾಗಿ ಉಡಾವಣೆ ಮಾಡಿತು.