Job Description: * ಮೆಟಾವರ್ಸ್ಎಂಬುದನ್ನು ಕಾನೂನು ಜಾರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಶ್ವದ ಮೊದಲ ಯೋಜನೆಯಾಗಿದೆ, ಇದನ್ನು ಇತ್ತೀಚಿಗೆ ಪ್ರಾರಂಭಿಸಲಾಯಿತು..* ನೊಂದಾಯಿತ ಬಳಕೆದಾರರಿಗೆ ತಮ್ಮ ಅವತಾರಗಳ ಮೂಲಕ ಇತರ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಫ್ರಾನ್ಸ್‌ನ ಲಿಯಾನ್‌ನಲ್ಲಿರುವ ಇಂಟರ್‌ಪೋಲ್‌ನ ಪ್ರಧಾನ ಕಾರ್ಯದರ್ಶಿಯ ಪ್ರಧಾನ ಕಚೇರಿಯ ವರ್ಚುವಲ್ ಪ್ರವಾಸವನ್ನು ಕೈಗೊಳ್ಳಲು ಉಪಯೋಗವಾಗಿದೆ. * 195 ಸದಸ್ಯ ರಾಷ್ಟ್ರಗಳ ಕಾನೂನು ಜಾರಿ ಅಧಿಕಾರಿಗಳ ಬಳಕೆಗಾಗಿ ಇದು ಪ್ರಸ್ತುತ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಹಾಗು ಫೋರೆನ್ಸಿಕ್ ತನಿಖೆ ಮತ್ತು ಇತರ ಪೋಲೀಸಿಂಗ್ ಕೌಶಲ್ಯಗಳ ಬಗ್ಗೆ ತರಬೇತಿ ಕೋರ್ಸ್‌ಗಳನ್ನು ಸಹ ಒದಗಿಸುತ್ತದೆ. .* ರಿಮೋಟ್ ಕೆಲಸದ ಸಾಮರ್ಥ್ಯಗಳು, ನೆಟ್‌ವರ್ಕಿಂಗ್, ಅಪರಾಧದ ದೃಶ್ಯಗಳಿಂದ ಸಾಕ್ಷ್ಯಗಳ ಸಂಗ್ರಹ ಮತ್ತು ಸಂರಕ್ಷಣೆ ಮತ್ತು ಸಾಮರ್ಥ್ಯ ವರ್ಧನೆಯಂತಹ ಪ್ರಯೋಜನಗಳನ್ನು ಒದಗಿಸುತ್ತದೆ.* ಇಂಟರ್‌ಪೋಲ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಇತರರೊಂದಿಗೆ ಸಹಯೋಗ ಹೊಂದಿರುವ ವರ್ಲ್ಡ್ ಎಕನಾಮಿಕ್ ಫೋರಮ್, ಮೆಟಾವರ್ಸ್ ಅನ್ನು ವ್ಯಾಖ್ಯಾನಿಸಲು ಮತ್ತು ನಿಯಂತ್ರಿಸಲು, ಸಾಮಾಜಿಕ ಎಂಜಿನಿಯರಿಂಗ್ ಸವಾಲುಗಳು, ಹಿಂಸಾತ್ಮಕ ಉಗ್ರವಾದ ಮತ್ತು ತಪ್ಪು ಮಾಹಿತಿಗಳು ಮೆಟಾವರ್ಸ್‌ನಲ್ಲಿ ಪ್ರಮುಖ ಬೆದರಿಕೆಗಳಾಗಿವೆ ಎಂದು ಮುಂಚಿತವಾಗಿಯೇ ತಿಳಿಯಲು ಅನುಕೂಲಕರವಾಗಿದೆ.* ಕಾನೂನು ಜಾರಿಗೆ ಸಂಬಂಧಿಸಿದ ಹೊಸ ಕೌಶಲ್ಯಗಳಲ್ಲಿ ಅನುಭವಗಳನ್ನು ಪಡೆಯಲು, 2026 ರಲ್ಲಿ ಕೆಲಸ ಮಾಡಲು, ಅಧ್ಯಯನ ಮಾಡಲು, ಶಾಪಿಂಗ್ ಮಾಡಲು ಮತ್ತು ಬೆರೆಯಲು ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಮೆಟಾವರ್ಸ್‌ನಲ್ಲಿ ಕನಿಷ್ಠ ಒಂದು ಗಂಟೆ ಕಳೆಯುವುದರೊಂದಿಗೆ, ಮುಂದಿನ ದಿನಗಳಲ್ಲಿ ಮೆಟಾವರ್ಸ್‌ನ ಪಾತ್ರವು ವಿಸ್ತಾರಗೊಳ್ಳುವ ನಿರೀಕ್ಷೆಯಿದೆ.* ಇಂಟರ್ಪೋಲ್ ಮೆಟಾವರ್ಸ್ ಈ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ಕಾನೂನು ಜಾರಿ ಅಧಿಕಾರಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣದ ಅವಕಾಶಗಳನ್ನು ಒದಗಿಸುವ ಮೂಲಕ ಸುರಕ್ಷಿತ ಭವಿಷ್ಯವನ್ನು ಸೃಷ್ಟಿಸುತ್ತದೆ.