Job Description: * ಬ್ರಿಟನ್ ನ ಪ್ರಧಾನಿಯಾಗಿರುವ ಲಿಜ್ ಟ್ರಸ್ ರವರು ದೇಶದಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಸಾಧ್ಯವಾಗದೆ, ಕೇವಲ 45 ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. * ಲಿಜ್ ಟ್ರಸ್ ರವರ ಆರ್ಥಿಕ ವಿಬಿಕ್ಕಟ್ಟನ್ನು ಎದುರಿಸದೆ ಇರುವ ಇವರನ್ನು ಕಾನ್ಸರ್ವೇಟಿವ್ ಸಂಸದರು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು, ಲಿಜ್ ರವರ ಆಡಳಿತ ವೈಖರಿಗೆ ಬಹಿರಂಗ ಅಸಮಾಧಾನಗೊಂಡು ಇಬ್ಬರು ಸಚಿವರು ಸಹ ರಾಜೀನಾಮೆ ನೀಡಿದರು. * ಭಾರತೀಯ ಮೂಲದ ಬ್ರಿಟನ್ನಿನ ಗೃಹ ಸಚಿವೆ ಸುಯೆಲ್ಲಾ ಬ್ರಾವರ್‌ಮನ್ ಅಕ್ಟೋಬರ್ 20 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, 43 ದಿನಗಳ ಹಿಂದೆ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅಧಿಕಾರ ವಹಿಸಿಕೊಂಡಾಗ ಗೃಹ ಕಾರ್ಯದರ್ಶಿಯಾಗಿ ಬ್ರಾವರ್ ಮನ್ ನೇಮಕಗೊಂಡಿದ್ದರು.* ಲಿಜ್ ಟ್ರಸ್ ರವರು "ನನಗೆ ಅಧಿಕಾರ ನೀಡಿದ ಉದ್ದೇಶವನ್ನು ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ, ಕಾನ್ಸರ್ವೇಟಿವ್ ನಾಯಕತ್ವ ತೊರೆಯುತ್ತಿದ್ದೇನೆ ಇದನ್ನು ದೊರೆ 3ನೇ ಚಾರ್ಲ್ಸ್ ರವರಿಗೆ ಹೇಳಿದ್ದೇನೆ" ಎಂದಿದ್ದಾರೆ. * ಹೊಸ ಮಾರುಕಟ್ಟೆಯ ಅವ್ಯವಸ್ಥೆಯನ್ನು ತಪ್ಪಿಸಲು ಕಳೆದ ತಿಂಗಳು ಘೋಷಿಸಲಾಗಿದ್ದ ತನ್ನ ಎಲ್ಲಾ ಸಾಲ-ಇಂಧನ ತೆರಿಗೆ ಕಡಿತಗಳನ್ನು ಬ್ರಿಟಿಷ್ ಸರ್ಕಾರ ರದ್ದುಗೊಳಿಸಿತ್ತು, ಇದು ಪ್ರಧಾನಿ ಲಿಜ್ ಟ್ರಸ್ ಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ ವಜಾಗೊಂಡ ಕ್ವಾಸಿ ಕ್ವಾರ್ಟೆಂಗ್ ಅವರ ಸ್ಥಾನಕ್ಕೆ ಬಂದ ನೂತನ ಹಣಕಾಸು ಮುಖ್ಯಸ್ಥ ಜೆರೆಮಿ ಹಂಟ್‌ರ ಆಘಾತಕಾರಿ ಕ್ರಮದಿಂದ ಲೀಜ್ ಸ್ಥಾನ ಇಕ್ಕಟ್ಟಿಗೆ ಸಿಲುಕಿ ರಾಜೀನಾಮೆ ಕೊಡುವಂತಾಯಿತು.