Job Description: * ಸುದೀರ್ಘ 24 ವರ್ಷಗಳ ನಂತರ ಗಾಂಧಿ ಕುಟುಂಬ ಹೊರತಾದ ವ್ಯಕ್ತಿ ಎಐಸಿಸಿ ಎಂಬ ಉನ್ನತ ಹುದ್ದೆಗೆ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ, ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಯಿಸಿದ್ದಾರೆ. * 80 ರ ಇಳಿವಯಸ್ಸಲ್ಲಿ ಬೆಟ್ಟದಷ್ಟು ಸವಾಲಿರುವ ಹುದ್ದೆ ಅಲಂಕರಿಸಿರುವದು ಐತಿಹಾಸಿಕ ಕ್ಷಣವಾಗಿದೆ.* * ಒಟ್ಟು ಮತಗಳ ವಿವರ : - - ಮಲ್ಲಿಕಾರ್ಜುನ್ ಖರ್ಗೆ 7,897 - ಶಶಿ ತರೂರ್ 1,072 - ಅಸಿಂಧು ಮತಗಳು 416 - ಚಲಾವಣೆಗೊಂಡದ್ದು 8,969 - ಒಟ್ಟು ಮತದಾರರು 9,385 * 2015ರಲ್ಲಿ ಕಲ್ಲಿದ್ದಲು ಹಗರಣ ತನಿಖೆಗಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದನ್ನು ಖಂಡಿಸಿ ಸಿಂಗ್ ಮನೆವರೆಗೆ ರ್ಯಾಲಿ ನಡೆಸಿ ಸೋನಿಯಾ ಭೇಟಿ ಮಾಡಿದ್ದರು. * ಮಲ್ಲಿಕಾರ್ಜುನ್ ಖರ್ಗೆ ಯವರು "ಪಕ್ಷದಲ್ಲಿ ಯಾರು ದೊಡ್ಡವರಲ್ಲ, ಯಾರು ಚಿಕ್ಕವರಲ್ಲ. ಪಕ್ಷದ ಸಂಘಟನೆಯನ್ನು ಬಲಪಡಿಸಲು ಕಾಂಗ್ರೆಸ್ ನ ನೈಜ ಯೋಧನಂತೆ ದುಡಿಯುತ್ತೇನೆ" ಎಂದು ಹೇಳಿದರು. * ಮಲ್ಲಿಕಾರ್ಜುನ್ ಖರ್ಗೆಯವರು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ನನಗೆ ಸಮಾನರು. ಪ್ರಜಾಪ್ರಭುತ್ವ ಹಾಗು ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಫ್ಯಾಸಿಸ್ಟ ಶಕ್ತಿಗಳ ವಿರುದ್ಧ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.