Job Description: * ಶ್ರೀಲಂಕಾದ 47 ವರ್ಷ ವಯಸ್ಸಿನ ಶೆಹನ್ ಕರುಣಾತಿಲಕ್ ರವರ ಎರಡನೇ ಕಾದಂಬರಿ "ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ" ಎಂಬ ಕಾದಂಬರಿಯು 2022 ನೇ ಸಾಲಿನಲ್ಲಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆಕಿದೆ. * ಇವರ ಕಾದಂಬರಿಯು 1990 ರ ದಶಕದ ಶ್ರೀಲಂಕಾ ಕಂಡ ಅತ್ಯಂತ ಕ್ರೂರ ಆಂತರಿಕ ಯುದ್ಧದಲ್ಲಿ ಕೊಲೆಯಾದ ಛಾಯಾಗ್ರಾಹಕ ಮಾಲಿ ಅಲ್ಮೇಡಾ ರವರ ಕುರಿತಾದ, ಕೊಲೆಯ ನಂತರದ ರೋಚಕ ಕಥೆಯನ್ನು ಹೇಳುತ್ತದೆ.* ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ ಕಾದಂಬರಿಯನ್ನು ಇಂಡಿಪೆಂಡೆಂಟ್ ಪ್ರೆಸ್ ಸಾರ್ಟ್ ಆಫ್ ಬುಕ್ಸ್ ಪ್ರಕಟಿಸಿದೆ. * ಅಕ್ಟೋಬರ್ 17 ರಂದು ಲಂಡನ್ ನಲ್ಲಿ ನಡೆದ ಸಮಾರಂಭದಲ್ಲಿ ಕರುಣಾತಿಲಕ್ ರವರು 50 ಸಾವಿರ ಪೌಂಡ (46.50 ಲಕ್ಷ) ನಗದು ಒಳಗೊಂಡ ಸಾಹಿತ್ಯ ಬಹುಮಾನ ಸ್ವೀಕರಿಸಿದ ಶ್ರೀಲಂಕಾದ ಎರಡನೆಯ ವ್ಯಕ್ತಿ ಇವರಾಗಿದ್ದಾರೆ. * ಶ್ರೀಲಂಕಾದ ಕಾದಂಬರಿಕಾರರಾದ ಮೈಕಲ್ ಒಂಡಾಟಿಜೆ ರವರು "ದಿ ಇಂಗ್ಲಿಷ್ ಪೇಷಂಟ್ ಎಂಬ ಕಾದಂಬರಿಗೆ 1992 ರಲ್ಲಿ ಬುಕರ್ ಪ್ರಶಸ್ತಿ ದೊರೆಕಿದೆ.