Job Description: * ಅಹ್ಮದಾಬಾದ್ ನಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 1,275 ಕೋಟಿ ರೂ.ಗಳ ವಿವಿಧ ಆರೋಗ್ಯ ಸೌಲಭ್ಯಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು.* ಆಸ್ಪತ್ರೆಗೆ ಆಗಮಿಸಿದ ಮೋದಿಯವರು ಅಲ್ಲಿನ ಆರೋಗ್ಯ ಮೂಲಸೌಕರ್ಯದ ಬಗ್ಗೆ ವಿಚಾರಿಸಿ ಹಲವಾರು ರೀತಿಯ ಸೌಲಭ್ಯಗಳ ಕುರಿತು ಮಾತನಾಡಿದರು.* ಪ್ರಧಾನಮಂತ್ರಿಯವರು ಫಲಕವನ್ನು ಅನಾವರಣಗೊಳಿಸಿದರು. (i) ಮಂಜುಶ್ರೀ ಮಿಲ್ ಕ್ಯಾಂಪಸ್‌ನಲ್ಲಿ ʻಮೂತ್ರಪಿಂಡ ರೋಗಗಳ ಸಂಶೋಧನಾ ಕೇಂದ್ರʼ(ಐಕೆಡಿಆರ್‌ಸಿ) (ii) ಅಸರ್ವದ ಸಾರ್ವಜನಿಕ ಆಸ್ಪತ್ರೆ ಕ್ಯಾಂಪಸ್‌ನಲ್ಲಿ ʻಗುಜರಾತ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆʼಯ 1ಸಿ ಆಸ್ಪತ್ರೆ ಕಟ್ಟಡ (iii) ʻಯು.ಎನ್. ಮೆಹ್ತಾ ಆಸ್ಪತ್ರೆʼಯಲ್ಲಿ ಹಾಸ್ಟೆಲ್ (iv) ʻಒಂದು ರಾಜ್ಯ-ಒಂದು ಡಯಾಲಿಸಿಸ್ʼನೊಂದಿಗೆ ಗುಜರಾತ್‌ ಡಯಾಲಿಸಿಸ್‌ ಕಾರ್ಯಕ್ರಮದ ವಿಸ್ತರಣೆ (v) ಗುಜರಾತ್ ರಾಜ್ಯಕ್ಕೆ ಕೀಮೋ ಕಾರ್ಯಕ್ರಮ ವಿಸ್ತರಣೆ. * ನಂತರ ಪ್ರಧಾನಮಂತ್ರಿಯವರು ಶಂಕು ಸ್ಥಾಪನೆ ಮಾಡಿದರು (i) ಗೋಧ್ರಾದಲ್ಲಿ ನೂತನ ವೈದ್ಯಕೀಯ ಕಾಲೇಜು (ii) ಸೋಲಾದಲ್ಲಿ ʻಜಿ.ಎಂ.ಇ.ಆರ್.ಎಸ್. ವೈದ್ಯಕೀಯ ಕಾಲೇಜಿʼನ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (iii) ಅಸರ್ವದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಯರ ವೈದ್ಯಕೀಯ ಕಾಲೇಜು (iv) ಅಸರ್ವದಲ್ಲಿ ರೆನ್ ಬಸೆರಾ ಸಾರ್ವಜನಿಕ ಆಸ್ಪತ್ರೆ (v) ಭಿಲೋಡಾದಲ್ಲಿ 124 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ, (vi) ಅಂಜರ್‌ನಲ್ಲಿ 100 ಹಾಸಿಗೆಗಳ ಉಪ-ಜಿಲ್ಲಾ ಆಸ್ಪತ್ರೆ. * ʻಮೂತ್ರಪಿಂಡ ರೋಗಗಳ ಸಂಸ್ಥೆʼ ಹಾಗೂ ʻಯು.ಎನ್. ಮೆಹ್ತಾ ಹೃದ್ರೋಗ ಆಸ್ಪತ್ರೆʼಯ ಸಾಮರ್ಥ್ಯ ಮತ್ತು ಸೇವೆಗಳನ್ನು ಸಹ ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು.