Job Description: * 2022 ರಲ್ಲಿ ಅಮೆರಿಕಾದ ಮೂರು ಜನ ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪ್ರಶಸ್ತಿ ದೊರೆಕಿದೆ, ಅಮೆರಿಕಾದ ಫೆಡರಲ್ ರೆಸೆರ್ವ್ ನ ಮಾಜಿ ಮುಖ್ಯಸ್ಥ ಬೆನ್ ಬಾರ್ನಾ೦ಕೆ ಸೇರಿದಂತೆ ಒಟ್ಟಾರೆ ಮೂರು ಜನ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. * ಆರ್ಥಿಕತೆಯಲ್ಲಿ ಬ್ಯಾಂಕ್ ಗಳ ಪಾತ್ರದ ಕುರಿತು ಮಾಡಿದ ವಿಶ್ಲೇಷಣೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. * ನೊಬೆಲ್ ಬಹುಮಾನ ಪಡೆದ ಬೆನ್ ಎಸ್ ಬೆರ್ನಾಂಕೆ, ಡೌಗ್ಲಾಸ್ ಡಬ್ಲ್ಯು ಡೈಮಂಡ್ ಮತ್ತು ಫಿಲಿಪ್ ಡಬ್ಲ್ಯು ಡೈಬವಿಗ್ ಅವರು ಅಮೆರಿಕದ ಅರ್ಥಶಾಸ್ತ್ರಜ್ಞರಾಗಿದ್ದಾರೆ. * ಇವರು ಮಾಡಿದ ಸಂಶೋಧನೆಯಿಂದ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟುಗಳು ದೀರ್ಘಾವಧಿ ಆರ್ಥಿಕ ಹಿಂಜರಿತಕ್ಕೆ ಬೀಳದಂತೆ ಹೇಗೆ ನಿರ್ವಹಿಸಬಹುದು ಎಂಬುದನ್ನು ಇವರ ಸಂಶೋಧನೆಗಳು ತೋರಿಸಿಕೊಟ್ಟಿವೆ. * ಹಣಕಾಸು ಮಾರುಕಟ್ಟೆಯ ನಿಯಂತ್ರಣ ಸೇರಿದಂತೆ, ಆರ್ಥಿಕತೆಯಲ್ಲಿ ಬ್ಯಾಂಕ್ ಗಳ ಕುರಿತು ಅರಿವು ಮೂಡಿಸುವಲ್ಲಿ ಈ ಮೂರು ಅರ್ಥಶಾತ್ರಜ್ಞರ ಪಾತ್ರ ಗಣನೀಯವಾಗಿದೆ. * 68 ವರ್ಷದ ಬಾರ್ನಾ೦ಕೆಯವರು 2006 ರಿಂದ 2014 ರವರೆಗೆ ಅಮೆರಿಕಾದ ಫೆಡರಲ್ ನ ಅಧ್ಯಕ್ಷರಾಗಿದ್ದರು. * 1953 ರಲ್ಲಿ ಜನಿಸಿದ್ದ ಡೈಮಂಡ್ ರವರು ಚಿಕ್ಯಾಗೊ ಯೂನಿವರ್ಸಿಟಿಯ ಪ್ರೊಫೆಸರ್ ಆಗಿದ್ದಾರೆ. * 67 ವರ್ಷದ ಫಿಲಿಪ್ ಎಚ್ ಡಿ ಬ್ ವಿಗ್ ರವರು ಸೆಂಟ್ ಲೂಯಿಸ್ ವಾಷಿಂಗ್ಟನ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿದ್ದಾರೆ. * ಪ್ರಶಸ್ತಿಯ ಒಟ್ಟು ಮೊತ್ತವು 7.44 ಕೋಟಿ ಆಗಿದೆ, ಡಿಸೆಂಬರ್ ನಲ್ಲಿ ಸ್ಟಾಕ್ ಹೋಮ್ ನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ 16 ನೇ ಕಾರ್ಲ್ ಗುಸ್ತಫ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.