Job Description: * ಸಿ.ಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ,ಯುವ ಉದ್ಯಮಿ ಭರತ್ ಬಿ.ಬೊಮ್ಮಾಯಿ ಅವರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಟೈಟಾನ್ ಬಿಸಿನೆಸ್ ಅವಾರ್ಡ್-2022 ದೊರೆಕಿದೆ. * ಭರತ್ ಬೊಮ್ಮಾಯಿಯವರು ಅಶ್ವ ಎನರ್ಜಿ ಮತ್ತು ವಾಲ್ಟೆಕ್ ಎಂಬ ಸಂಸ್ಥೆಗಳನ್ನು ಮುನ್ನಡೆಸುತ್ತಾ ಉತ್ಪಾದನೆ ವಿಭಾಗದಲ್ಲಿ ವರ್ಷದ ಜಾಗತಿಕ ವಾಣಿಜ್ಯೋದ್ಯಮಿಯಾಗಿ (Entrepreneur for the year 2022) ಅಪಾರವಾದ ಸಾಧನೆಗೈದಿದ್ದರೆ. * 2022 ರ-ಟೈಟಾನ್ ಬಿಸಿನೆಸ್ ಅವಾರ್ಡ್ ಸೀಸನ್ 2 ರಲ್ಲಿ ನಿರ್ಣಾಯಕ ವಿಜಯವನ್ನು ಸಾಧಿಸಿದ್ದಾರೆ ಹಾಗಾಗಿ ಟೈಟಾನ್ ಬಿಸಿನೆಸ್ ಅವಾರ್ಡ್ ಆಯೋಜಕರಾದ ಇಂಟರ್ನ್ಯಾಷನಲ್ ಅವಾರ್ಡ್ಸ್ ಅಸೋಸಿಯೇಟ್ (IAA), ಸ್ಪರ್ಧೆಯ ತೀರ್ಪುಗಾರರು ಭರತ್ ಬಿ.ಬೊಮ್ಮಾಯಿ (ಅಶ್ವ ಎನರ್ಜಿ ಮತ್ತು ವಾಲ್ಟೆಕ್) ಅವರ ಪ್ರವೇಶವನ್ನು (ಗೋಲ್ಡ್) ಟೈಟಾನ್ ಪ್ರಶಸ್ತಿಗೆ ಅರ್ಹರು ಎಂದು ಪರಿಗಣಿಸಿದ್ದಾಗಿ ತಿಳಿಸಿದ್ದಾರೆ* 2022 ರ ಟೈಟಾನ್ ಬಿಸಿನೆಸ್ ಅವಾರ್ಡ್ಸ್‌: ಸೀಸನ್ 2ರ ಸ್ಪರ್ಧೆಗೆ ಯುಎಸ್ಎ, ಯುನೈಟೆಡ್‌ ಕಿಂಗ್‌ಡಮ್‌, ಆಸ್ಟ್ರೇಲಿಯಾ, ಕೆನಡಾ, ಚೀನಾ, ಭಾರತ, ಓಮನ್‌, ಫಿಲಿಪೈನ್ಸ್‌, ಪೋರ್ಚುಗಲ್‌, ಯುಎಇ ಸೇರಿದಂತೆ ಸುಮಾರು 55 ದೇಶಗಳಿಂದ 1,000 ಕ್ಕೂ ಹೆಚ್ಚು ಪ್ರವೇಶಗಳು ಬಂದಿದ್ದವು. ವಾಣಿಜ್ಯೋದ್ಯಮಿಗಳು, SMEಗಳು ಮತ್ತು ದೊಡ್ಡ ಸಂಸ್ಥೆಗಳು ಸ್ಪರ್ಧೆಗೆ ಬಂದಿದ್ದವು. * ನಿರ್ದಿಷ್ಟ ಗುಂಪಿನಲ್ಲಿ RLM Underground, Gravity Global, InnoverAisera, OYO Homes and Hotels Private Limited, Lazarev.agency, Bharat Aluminium Company Ltd., Onit, Ambiq, Paycor, Honeywell, Ellucian, ಮತ್ತು Fifth & Cor ನಂತಹ ಅನೇಕ ಪ್ರತಿಷ್ಠಿತ ಸಂಸ್ಥೆಗಳೂ ಸೇರಿದೆ. ಈ ಎಲ್ಲ ಸಂಸ್ಥೆಗಳ ಜೊತೆ ಭಾಗವಹಿಸಿದ ಭರತ್ ಬಿ.ಬೊಮ್ಮಾಯಿ ಅವರು 2022 ರ - ಟೈಟಾನ್ ಅವಾರ್ಡ್ ಸೀಸನ್ 2 ರ ಸಾಧಕರಾಗಿದ್ದರೆ .